ಆಲೂಗಡ್ಡೆ ಕೇಕ್

ಸೋಮವಾರ, 17 ನವೆಂಬರ್ 2014 (11:17 IST)
ಬೇಕಾಗುವ ಪದಾರ್ಥಗಳು: ಅಲೂಗಡ್ಡೆ, ಸಕ್ಕರೆ, ಸಕ್ಕರೆ ರಹಿತ ಖೋವಾ, ತುಪ್ಪ, ಏಲಕ್ಕಿಪುಡಿ, ಪಚ್ಚೆ ಕರ್ಪೂರ, ಕೇಸರಿ ದಳ.
 
ಪಾಕ ವಿಧಾನ: ಮೊದಲಿಗೆ ಅಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ಸುಲಿದು, ಗಂಟುಗಳಿಲ್ಲದೇ ಪುಡಿ ಮಾಡಿಟ್ಟುಕೊಳ್ಳಿ. ಖೋವಾವನ್ನು ಪುಡಿಮಾಡಿದ ಅಲೂಗಡ್ಡೆಯೊಂದಿಗೆ ಸೇರಿಸಿ ಚೆನ್ನಾಗಿ ಬೆರೆಸಿ. ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಸಕ್ಕರೆ ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ. ಸರಿಯಾಗಿ ಪಾಕ ಬಂದ ನಂತರ ಇದಕ್ಕೆ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ, ಒಲೆಯ ಮೇಲಿಟ್ಟು ಮತ್ತೊಮ್ಮೆ ಚೆನ್ನಾಗಿ ಕಲಸಿರಿ. ಇದಕ್ಕೆ ತುಪ್ಪವನ್ನು ಸೇರಿಸಿ ಬಾಣಲೆಯಿಂದ ಬೇರ್ಪಡುವವರೆಗೆ ಕಲಸುತ್ತಿರಿ. ನಂತರ ಇದಕ್ಕೆ ಬಣ್ಣ, ಏಲಕ್ಕಿಪುಡಿ, ಪಚ್ಚಕರ್ಪೂರದ ಪುಡಿ, ಬಿಸಿ ಹಾಲಿನಲ್ಲಿ ಕರಗಿಸಿದ ಕೇಸರಿದಳಗಳನ್ನು ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು, ಆರಿದ ನಂತರ ತುಂಡುಗಳಾಗಿ ಕತ್ತರಿಸಿರಿ.  

ವೆಬ್ದುನಿಯಾವನ್ನು ಓದಿ