ಸುಲಭವಾಗಿ ರೆಡಿಯಾಗುವ ಆಲೂಗಡ್ಡೆ ಫ್ರೈ

ಶುಕ್ರವಾರ, 29 ಡಿಸೆಂಬರ್ 2017 (16:35 IST)
ಬೆಂಗಳೂರು: ಅನ್ನ, ಸಾರು ಊಟ ಮಾಡುವಾಗ ಜೊತೆಗೆ ಏನಾದರೂ ಸೈಡಲ್ಲಿ ತಿನ್ನಲು ಬೇಕು ಅಂತ ಎಲ್ಲರಿಗೂ ಸಹಜವಾಗಿ ಅನಿಸುತ್ತೆ. ಏನಾದರೂ ಮಾಡಬೇಕು ಅಂದಾಗ ತುಂಬಾ ಸಮಯ ಬೇಕಾಗುತ್ತೆ. ಆದ್ದರಿಂದ ಆಲೂಗಡ್ಡೆ ಪ್ರೈಯನ್ನು ಮಾಡಿದರೆ ಊಟದ  ಜೊತೆ ತಿನ್ನಬಹುದು. ಇದು ಸುಲಭವಾಗಿ ಬೇಗ ರೆಡಿಯಾಗುತ್ತದೆ.


ಬೇಕಾಗುವ ಸಾಮಾಗ್ರಿಗಳು:

ಆಲೂಗಡ್ಡೆ(ನಿಮಗೆ ಬೇಕಾಗುವಷ್ಟು), ನಿಂಬೆಹಣ್ಣು, ಉಪ್ಪು, ಅರಶಿನ ಪುಡಿ, ಮೆಣಸಿನ ಪುಡಿ, ರವಾ, ಗರಂಮಸಾಲ ಪುಡಿ, ಎಣ್ಣೆ.


ಮಾಡುವ ವಿಧಾನ:
ಮೊದಲು ಆಲೂಗಡ್ಡೆಯನ್ನು ತೊಳೆದು ರೌಡಾಗಿ ತೆಳ್ಳಗೆ ಕಟ್ಟಮಾಡಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ನಿಂಬೆರಸ ಹಾಗು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಅದನ್ನು ½ ಗಂಟೆಯವರೆಗೂ ಒಂದುಕಡೆ ಮುಚ್ಚಿಡಿ. ನಂತರ ಒಂದು ಪಾತ್ರೆಯಲ್ಲಿ ಅರಶಿನ ಪುಡಿ ಸ್ವಲ್ಪ, ಮೆಣಸಿನ ಪುಡಿ ಸ್ವಲ್ಪ, ರವಾ ಸ್ವಲ್ಪ, ಗರಂಮಸಾಲ ಪುಡಿ ಸ್ವಲ್ಪ( ಬೇಕಾದಲ್ಲಿ ಉಪ್ಪನ್ನು ಹಾಕಿಕೊಳ್ಳಬಹುದು) ಹಾಕಿ ಚೆನ್ನಾಗಿ ನೀರು ಹಾಕದೆ ಮಿಕ್ಸ್ ಮಾಡಿ. ನಂತರ ಅದಕ್ಕೆ ಆಲೂಗಡ್ಡೆ ಪೀಸನ್ನು  ಅದ್ದಿ. ತವಾ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಮೇಲೆ ಈ  ಆಲೂಗಡ್ಡೆ ಪೀಸನ್ನು ಇಟ್ಟು ಚೆನ್ನಾಗಿ ಬೇಯುವವರೆಗೂ ಕಾಯಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ