ಮಾಡುವ ವಿಧಾನ:
ಈರುಳ್ಳಿ, ಶುಂಠಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಟೊಮೆಟೋ ಎಲ್ಲವನ್ನೂ ಚಿಕ್ಕದಾಗಿ ಹೆಚ್ಚಿರಿಸಿಕೊಳ್ಳಿ. ಒಂದು ಪ್ಯಾನ್‌ನಲ್ಲಿ 3 ಕಪ್ ನೀರನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಓಮಕಾಳು, 2 ಟೀ ಚಮಚ ಎಣ್ಣೆಯನ್ನು ಹಾಕಿ ಕುದಿಸಿ. ನಂತರ 1 ರಿಂದ 11/4 ಕಪ್ ಹುರಿದ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರವೆ ಚೆನ್ನಾಗಿ ಬೆಂದು ನೀರು ಆರಿದ ನಂತರ ಪ್ಯಾನ್ ಅನ್ನು ಬದಿಯಲ್ಲಿರಿಸಿ. ಈಗ ಇನ್ನೊಂದು ಪ್ಯಾನ್ ಅನ್ನು ತೆಗೆದುಕೊಂಡು ಸ್ಟೌ ಮೇಲಿಟ್ಟು 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ 1 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ ಮತ್ತು ಶುಂಠಿಯನ್ನು ಹಾಕಿ ಹುರಿಯಿರಿ. ಒಂದು ನಿಮಿಷದ ನಂತರ ಎಲ್ಲಾ ಹೆಚ್ಚಿದ ತರಕಾರಿಗಳನ್ನು ಮತ್ತು ಬಟಾಣಿಯನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 2-3 ನಿಮಿಷ ಮುಚ್ಚಿ ಬೇಯಿಸಿ. ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿಣ, ಗರಂಮಸಾಲಾ , ಚಾಟ್ ಮಸಾಲಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಬಟಾಟೆ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ.