10 ನಿಮಿಷದಲ್ಲಿ ಪಾಲಕ್ ರೈಸ್ ರೆಡಿ
ಬುಧವಾರ, 15 ಜೂನ್ 2022 (16:05 IST)
ದಕ್ಷಿಣ ಭಾರತದ ಜನರು ಅನ್ನವನ್ನು ಹೆಚ್ಚು ತಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ.
ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ.
ʼಪಾಲಕ್ ರೈಸ್ʼ ರೆಸಿಪಿ ರುಚಿಕರ ಮತ್ತು ಮಸಾಲೆಯುಕ್ತವಾಗಿದ್ದು, 10 ನಿಮಿಷದಲ್ಲಿಯೇ ಮಾಡಬಹುದು. ಅದರಲ್ಲಿಯೂ ಪಾಲಕ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಟ್ರೈ ಮಾಡಿ.
ಬೇಕಾಗಿರುವ ಪದಾರ್ಥಗಳು
* ಬಾಸ್ಮತಿ ಅಕ್ಕಿ – 1 ಕಪ್
* ತುಪ್ಪ – 2 ಚಮಚ
* ಕಟ್ ಮಾಡಿದ ಈರುಳ್ಳಿ – ಕಪ್
* ಹಸಿರು ಮೆಣಸಿನಕಾಯಿ – 2
* ಕಟ್ ಮಾಡಿದ ಪಾಲಾಕ್ ಎಲೆಗಳು – 1 ಕಪ್
* ನೆನೆಸಿದ ಬಟಾಣಿ – 1 ಕಪ್
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಲವಂಗ – 1
* ಪಲಾವ್ ಎಲೆ – 1
* ಸಾಸಿವೆ – 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಮೊದಲನೆಯದಾಗಿ ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಪಲಾವ್ ಎಲೆ, ಲವಂಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
* ಈ ಮಿಶ್ರಣಕ್ಕೆ ಕಟ್ ಮಾಡಿದ್ದ ಪಾಲಾಕ್ ಎಲೆಗಳನ್ನು ಹಾಕಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
* ಪಾಲಾಕ್ ಎಲೆಗಳು ಫ್ರೈ ಮಾಡಿದ ನಂತರ, ಅದಕ್ಕೆ ಬಟಾಣಿ ಸೇರಿಸಿ ಫ್ರೈ ಮಾಡಿ.
* ಈ ಫ್ರೈಗೆ ಬೇಯಿಸಿದ ಅನ್ನ ಮತ್ತು ರುಚಿಗೆ ಉಪ್ಪು ಮಿಶ್ರಣ ಮಾಡಿ, ಒಂದು ನಿಮಿಷ ಬೇಯಿಸಿ.