ಗೋಧಿಹಿಟ್ಟಿನ ಅಮೃತ ಫಲ

ಶನಿವಾರ, 15 ನವೆಂಬರ್ 2014 (16:58 IST)
ಬೇಕಾಗುವ ಸಾಮಗ್ರಿ- 1 ಕಪ್ ಗೋಧಿ ಹಿಟ್ಟು, 1 ಕಪ್ ಬೆಲ್ಲ, 1 ಕಪ್ ಹಸಿ ಕೊಬ್ಬರಿ, 1 ಚಮಚ ಗಸೆಗಸೆ, ಸ್ವಲ್ಪ ದ್ರಾಕ್ಷಿ, ಗೋಡಂಬಿ.
 
ಮಾಡುವ ವಿಧಾನ- ಹಸಿ ಕೊಬ್ಬರಿಯನ್ನು ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ಬಾಣಲೆಯಲ್ಲಿ ಬೆಲ್ಲವನ್ನು ಪುಡಿ ಮಾಡಿ ಹಾಕಿ ನೀರು ಸೇರಿಸಿ ಪಾಕ ಮಾಡಬೇಕು. ಇದ್ಕಕೆ ರುಬ್ಬಿದ ಕಾಯಿ ತುರಿ ಸೇರಿಸಬೇಕು. ಏಲಕ್ಕೆ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ನಂತರ ಗೋಧಿ ಹಿಟ್ಟನ್ನು ಹಾಕಿ ಮುದ್ದೆಯ ಹಾಗೆ ಗಟ್ಟಿಯಾಗಿ ತಿರುವಬೇಕು. ತಟ್ಟೆಗೆ ತುಪ್ಪ ಸವರಿ ಹಾಕಬೇಕು. ನಂತರ ಅಲಂಕಾರಕ್ಕಾಗಿ ದ್ರಾಕ್ಷಿ, ಗೋಡಂಬಿ, ಒಣಗೊಬ್ಬರಿ ತುರಿ ಹಾಕಿ ಅಲಂಕರಿಸಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಬೇಕು.

ವೆಬ್ದುನಿಯಾವನ್ನು ಓದಿ