ರೆಸಿಪಿ: ಆಲೂಗಡ್ಡೆ ಸಲಾಡ್

ಬುಧವಾರ, 22 ಜೂನ್ 2016 (13:51 IST)
ಆಲೂಗಡ್ಡೆ ಎಲ್ಲರಿಗೂ ಇಷ್ಟವಾಗುವ ತಿನಿಸು.. ಆಲೂಗಡ್ಡೆ ಯಿಂದ ಚೀಪ್ಸ್..ಆಲು ಬಾತ್.. ಆಲು ಜೀರಾ ರೈಸ್, ಆಲು ಮೆಥಿ ಹೀಗೆ ಬಗೆ ಬಗೆಯ ತಿನಿಸುಗಳನ್ನು ಮಾಡಬಹುದು. ಆದ್ರೆ ಆಲೂಗಡ್ಡೆ ಸಲಾಡ್ ಎಲ್ಲಕ್ಕಿಂತಲೂ ರುಚಿಕರವಾದ ತಿನಿಸು. ಸಲಾಡ್‌ನ್ನು
ಕಡಿಮೆ ಸಮಯದಲ್ಲಿ ತಯಾರಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

ಆಲೂಗಡ್ಡೆ ಸಲಾಡ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು 
750 ಗ್ರಾಂ ಆಲುಗಡ್ಡೆ
75 ಗ್ರಾಂ ಮಜ್ಜಿಕೆ
1 ಟೀ ಸ್ಪೂನ್ ಡಿಜೂನ್ ಸಾಸಿವೆ
1 ಟೀ ಸ್ಪೂನ್ ವಿನೀಗರ್ 
1 ಟೀ ಸ್ಪೂನ್ ಸಕ್ಕರೆ 
1 ಈರುಳ್ಳಿ, ಟಮೊಟಾ,ಸೌತೆಕಾಯಿ 
100 ಗ್ರಾಂ ಕೆಂಪು ಮೂಲಂಗಿ
1 ಟೀ ಸ್ಪೂನ್ ಗಸಗಸೆ ಬೀಜ
 
ಆಲೂಗಡ್ಡೆಯನ್ನು ತೆಗೆದುಕೊಂಡು ಅದರಲ್ಲಿ  ಉಪ್ಪು ಬೆರಸಿ ಬಾಣಲೆಯಲ್ಲಿ ಆಲುಗಡ್ಡೆಯನ್ನು ನೀರಿನಲ್ಲಿ ಕುದಿಸಿರಿ... 12 ನಿಮಿಷಗಳ ತನಕ ಕುದಿಸಿಬೇಕು. ತಣ್ಣನೆಯ ನೀರಿನಲ್ಲಿ ಕುದಿಸಿರುವ ಆಲೂಗಡ್ಡೆಯನ್ನ ಹಾಕಿ, ಬಳಿಕ 
 
ಮಜ್ಜಿಗೆ, ಸಾಸಿವೆ ವಿನಿಗರ್ ಹಾಗೂ ಮೇಯನೆಸ್, ಸಕ್ಕರೆಯನ್ನು ಬೆರೆಸಿ ಮಸಾಲೆ ಮಾಡಿಕೊಳ್ಳಬೇಕು. ಮಸಾಲೆಯಲ್ಲಿ ಈರುಳ್ಳಿ,ಟಮೊಟೊ, ಸೌತೆಕಾಯಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಕಡೆಗೆ ಒಂದು ಬಾಣಲೆಯಲ್ಲಿ ಆಲುಗಡ್ಡೆ ಪೀಸ್‌ಗಳಿಗೆ ಮಸಾಲೆ ಈರುಳ್ಳಿ,ಟಯೊಟಾವನ್ನು ಹಾಕಿದ್ರೆ ರುಚಿಕಟ್ಟಾದ ಆಲೂಗಡ್ಡೆ ಸಲಾಡ ಸವಿಯಲು ರೆಡಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ