ಬೆಳಿಗ್ಗಿನ ತಿಂಡಿಗೆ ಬಿಸಿಬಿಸಿ ಶ್ಯಾವಿಗೆ ಉಪ್ಪಿಟ್ಟು

ಗುರುವಾರ, 27 ಆಗಸ್ಟ್ 2020 (08:32 IST)
ಬೆಂಗಳೂರು : ಬೆಳಿಗ್ಗೆ ಉಪಹಾರಕ್ಕೆ ಶ್ಯಾವಿಗೆ ಉಪ್ಪಿಟ್ಟು ಮಾಡಿ ತಿಂದರೆ ರುಚಿಕರವಾಗಿರುತ್ತದೆ. ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಾಗ್ರಿಗಳು : 2 ಕಪ್ ಶ್ಯಾಮಿಗೆ, 2.5 ಕಪ್ ನೀರು, ಉಪ್ಪು, ½ ತೆಂಗಿನಕಾಯಿ, 4 ಚಮಚ ಕೊತ್ತಂಬರಿ ಸೊಪ್ಪು, 2 ಚಮಚ ಎಣ್ಣೆ, ½ ಚಮಚ ಸಾಸಿವೆ, 2  ಚಮಚ ಉದ್ದಿನಬೇಳೆ, 1 ಚಮಚ ಕಡಲೇಬೇಳೆ, ಚಿಟಿಕೆ ಇಂಗು, 4 ಹಸಿಮೆಣಸಿನಕಾಯಿ, 1ಈರುಳ್ಳಿ, 1 ಚಿಟಿಕೆ ಅರಶಿನ, ¼  ಕಪ್ ಕ್ಯಾರೆಟ್, ¼ ಕಪ್ ಕ್ಯಾಪ್ಸಿಕಂ, ¼ ಕಪ್ ಬಟಾಣಿ, ಕರಿಬೇವು.

ಮಾಡುವ ವಿಧಾನ : ಶ್ಯಾವಿಗೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ನೀರನ್ನು ಕುದಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. ಬಳಿಕ ಹಸಿಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಅರಶಿನ ಪುಡಿಯನ್ನು ಸೇರಿಸಿ ಫ್ರೈ ಮಾಡಿ. ಆಮೇಲೆ ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ ಸೇರಿಸಿ ಫ್ರೈ ಮಾಡಿ. ಬಳಿಕ ನೀರು, ತೆಂಗಿನಕಾಯಿ, ಉಪ್ಪು ಸೇರಿಸಿ ಕುದಿಸಿ. ತರಕಾರಿ ಬೆದ ಬಳಿಕ ಶಾವಿಗೆ ಹಾಕಿ ಮುಚ್ಚಳ ಮುಚ್ಚಿ ಸಣ್ಣ ುರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಶ್ಯಾವಿಗೆ ಉಪ್ಪಿಟ್ಟು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ