ಬೆಂಗಳೂರು: ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ವ್ಯಕ್ತಿತ್ವವೂ ಇರುತ್ತದೆ ಅಂತಾರೆ. ಅಂದದ ಮುಖದಲ್ಲೇ ಇಂಪ್ರೆಸ್ ಮಾಡಬೇಕಾದರೆ ಅದನ್ನು ಸರಳ ಉಪಾಯಗಳಿಂದ ಸುಂದರವಾಗಿರಿಸಿ.
· ಒಳ್ಳೆ ಕಾಂತಿಗೆ ಟೊಮೆಟೋ ರಸವನ್ನು ಹಚ್ಚಿ ನಂತರ ಮುಖ ತೊಳೆದುಕೊಳ್ಳಿ.
· ಗುಲಾಬಿ ಹೂವಿನ ದಳ ಮತ್ತು ಶ್ರೀಗಂಧವನ್ನು ಜತೆಗೆ ಅರೆದುಕೊಂಡು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳಿ.
· ಮುಖ ಎಣ್ಣೆ ಸೋಕಿದಂತೆ ಜಿಡ್ಡು ಇದ್ದರೆ ತಣ್ಣೀರಿನಲ್ಲಿ ಆಗಾಗ್ಗೆ ಮುಖ ತೊಳೆದುಕೊಳ್ಳಿ.
· ಎಳೆನೀರು ಕುಡಿಯಿರಿ ಮತ್ತು ತೆಂಗಿನ ಕಾಯಿಯ ನೀರಿನಿಂದ ಮುಖ ತೊಳೆದುಕೊಂಡರೆ ಉತ್ತಮ.
· ಚರ್ಮ ಬಿರುಕಾಗಿದ್ದರೆ ಪ್ರತಿ ನಿತ್ಯ ಆ ಭಾಗಗಳಿಗೆ ಸಾಸಿವೆ ಎಣ್ಣೆ ಹಚ್ಚಿ.
· ಮಂಜುಗಡ್ಡೆ ಲೇಪನ ಮುಖಕ್ಕೆ ಒಳ್ಳೆ ಲೇಪನ.
· ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಸವರಿ ಮಲಗಿಕೊಂಡರೆ ಚರ್ಮ ಮೃದುವಾಗುವುದು.
· ಎಷ್ಟೇ ಮೇಕಪ್ ಮಾಡಿಕೊಂಡರೂ ರಾತ್ರಿ ಮಲಗುವ ಮುನ್ನ ಮಂಜುಗಡ್ಡೆ ಹಾಕಿ ಮುಖ ತೊಳೆದುಕೊಂಡು ಮಲಗಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ