ಸಿಹಿ ಸಿಹಿಯಾದ ಅನಾನಸು ಪಾಯಸ ಮಾಡಿ ಬಡಿಸಿ

ಗುರುವಾರ, 12 ಜನವರಿ 2017 (11:12 IST)
ಬೆಂಗಳೂರು: ಮನೆಗೆ ನೆಂಟರು ಬರುತ್ತಾರೆ ಏನಾದರು ಸ್ಪೆಷಲಾಗಿ ಸಿಹಿ ಮಾಡಬೇಕು ಎಂದುಕೊಂಡವರಿಗೆ ಒಂದು ಪಾಯಸ ರೆಸಿಪಿ. ಅನಾನಸು ಅಥವಾ ಪೈನಾಪಲ್ ಪಾಯಸ ಮಾಡೋದು ಹೇಗೆ ಎಂದು ನೋಡಿಕೊಳ್ಳಿ.


ಬೇಕಾಗುವ ಸಾಮಗ್ರಿ

ಅನಾನಸು
ಬೆಲ್ಲ
ಅಕ್ಕಿ
ಕಾಯಿ ತುರಿ

ಮಾಡುವ ವಿಧಾನ

ನೆನೆಸಿದ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಅಾನಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಕಾಯಿ ಹಾಲಿನ ಜತೆ ಕುದಿಸಿ. ಅನಾನಸು ಬೆಂದ ನಂತರ ಬೆಲ್ಲ ಹಾಕಿ ಮತ್ತಷ್ಟು ಕುದಿಸಿ. ಇದಕ್ಕೆ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ತಿರುವಿ. ಅಕ್ಕಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ. ನಂತರ ದಪ್ಪ ಕಾಯಿ ಹಾಲನ್ನು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ