ರುಚಿ ರುಚಿಯಾದ ಮೊಟ್ಟೆ ಮಸಾಲ

ಅತಿಥಾ

ಮಂಗಳವಾರ, 26 ಡಿಸೆಂಬರ್ 2017 (14:18 IST)
ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಕರಿಗಳಲ್ಲಿ ಮೊಟ್ಟೆ ಮಸಾಲವು ಒಂದು. ಇದನ್ನು ಮಾಡುವ ವಿಧಾನ ಸರಳವಾಗಿದ್ದು ರೊಟ್ಟಿ, ಚಪಾತಿ ಮತ್ತು ಅನ್ನದೊಂದಿಗೆ ತುಂಬಾ ರುಚಿಯಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ.
 
ಮೊಟ್ಟೆ ಮಸಾಲಾ


ಬೇಕಾಗುವ ಸಾಮಗ್ರಿ
ಮೊಟ್ಟೆ 4 (ಬೇಯಿಸಿದ್ದು) - (ಅರ್ಧ ತುಂಡರಿಸಿದ್ದು)
ಈರುಳ್ಳಿ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಟೊಮೆಟೊ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಹಸಿಮೆಣಸು - 5 ರಿಂದ 6
ಅಚ್ಚಖಾರದ ಪುಡಿ - 1/2 ಚಮಚ
ಜೀರಿಗೆ ಪುಡಿ- 1/2 ಚಮಚ
ಕೊತ್ತೊಂಬರಿ ಪುಡಿ - 1/2 ಚಮಚ
ಬೆಳ್ಳುಳ್ಳಿ - 4 ರಿಂದ 5 ಎಸಳು
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ:
ಮೊದಲು ಮಿಕ್ಸಿಯಲ್ಲಿ ಟೊಮೆಟೋ, ಬೆಳ್ಳುಳ್ಳಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ಬಳಿಕ ಅದಕ್ಕೆ ಈರುಳ್ಳಿ, ಹಸಿಮೆಣಸು, ಈರುಳ್ಳಿಯನ್ನು ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ ನಂತರ ಅದಕ್ಕೆ ರುಬ್ಬಿಕೊಂಡ ಟೊಮೇಟೊ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ತಳ ಹಿಡಿಯದ ಹಾಗೇ ತಿರುವುತ್ತೀರಿ. ಇದಕ್ಕೆ ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿ. ಸುಮಾರು ಅರ್ಧ ನಿಮಿಷದ ಬಳಿಕ ಮೊಟ್ಟೆಯ ತುಂಡುಗಳನ್ನು ಹಾಕಿ ಬಾಡಿಸಿ. ಮೊಟ್ಟೆಯ ಅಂಚುಗಳು ಕಂದು ಬಣ್ಣ ಬರುತ್ತಿದ್ದಂತೆ ಕೊತ್ತಂಬರಿ ಸೊಪ್ಪು ಹಾಕಿ ತಿರುವಿದರೆ ರುಚಿಕರ ಮೊಟ್ಟೆ ಮಸಾಲಾ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ