ಬೆಂಗಳೂರು: ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ಎಷ್ಟು ಉಪಯೋಗವಿದೆ ಎಂದು ಗೊತ್ತಾದರೆ ನೀವು ಅದನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಯೋಚಿಸುವಿರಿ.
ಒಡೆದ ಹಿಮ್ಮಡಿಗೆ
ಈ ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆತ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೆ ಈರುಳ್ಳಿ ಸಿಪ್ಪೆಯನ್ನು ಬಳಸಬಹುದು. ಈರುಳ್ಳಿ ಸಿಪ್ಪೆಯನ್ನು 10 ರಿಂದ 20 ನಿಮಿಷ ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಕಾಲು ಅದ್ದಿಟ್ಟರೆ ಹಿಮ್ಮಡಿ ಮೃದುವಾಗುವುದು.
ಕಂಪೋಸ್ಟ್ ಗೆ ಬಳಸಿ
ನಿಮ್ಮ ಮನೆಯಲ್ಲಿ ಸಸಿಯಿದ್ದರೆ ಅದಕ್ಕೆ ಈರುಳ್ಳಿ ಸೊಪ್ಪನ್ನು ಕಂಪೋಸ್ಟ್ ಮಾಡಿ ಹಾಕಿ. ಇದು ಗಿಡಗಳಿಗೆ ಬೆಸ್ಟ್ ಗೊಬ್ಬರವಾಗುತ್ತದೆ.
ಸೂಪ್ ಗೆ ಬಳಸಿ
ಈರುಳ್ಳಿ ಸಿಪ್ಪೆಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಂಶವಿರುತ್ತದೆ. ಹಾಗಾಗಿ ಸೂಪ್ ಮಾಡುವಾಗ ಇದನ್ನು ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ