ಕೊಲ್ಲಾಪುರಿ ಚಿಕನ್ ಮಸಾಲಾ

ಅತಿಥಾ

ಬುಧವಾರ, 20 ಡಿಸೆಂಬರ್ 2017 (15:51 IST)
ದೇಶಿಯ ಅಡುಗೆ ತಯಾರಿಸುವಿಕೆಯು ಇತರ ದೇಶಗಳಿಗೆ ಹೋಲಿಸಿದರೆ ವಿಭಿನ್ನ ಅದರಲ್ಲೂ ದಕ್ಷಿಣ ಭಾರತದ ಅಡುಗೆ ಪದ್ಧತಿ ಇನ್ನು ವಿಶೇಷ. ದಕ್ಷಿಣ ಭಾರತದಲ್ಲಿ ಅಡುಗೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುತ್ತಾರೆ ಅದರಲ್ಲೂ ನಾನ್ ವೆಜ್ ಅಡುಗೆಗಳು ತುಂಬಾನೇ ರುಚಿಕರವಾಗಿರುತ್ತದೆ. ಅಂತಹ ಒಂದು ಭಕ್ಷ್ಯಗಳಲ್ಲಿ ಕೊಲ್ಲಾಪುರಿ ಚಿಕನ್ ಮಸಾಲಾ ಕೂಡಾ ಒಂದು.
ಬೇಕಾಗುವ ಸಾಮಗ್ರಿಗಳು
 
1 ಕೆಜಿ ಚಿಕನ್
2/3 ಕಪ್ ಮೊಸರು
1 ಟೀ ಚಮಚ ಅರಿಶಿನ
2 ಟೀ ಚಮಚ ಖಾರ ಪುಡಿ
1 ಟೀ ಚಮಚ ಬೆಳ್ಳುಳ್ಳಿ ಪೇಸ್ಟ್
ಉಪ್ಪು 
1 ಟೀ ಚಮಚ ನಿಂಬೆ ರಸ
ಕೊಲ್ಲಾಪುರ ಮಸಾಲಾಗೆ:
2 ಟೀ ಚಮಚ ಎಣ್ಣೆ
1 ಲವಂಗದ ಎಲೆ
2 ಚಕ್ಕೆ ತುಂಡು
6 ಲವಂಗಗಳು
ಪುಡಿಮಾಡಿದ ಕಾಳುಮೆಣಸು
1/2 ಚಮಚ ಕಪ್ಪು ಮೆಣಸು (ಪುಡಿಮಾಡಿ)
2 ಮಧ್ಯಮ ಗಾತ್ರದ ಈರುಳ್ಳಿ
2 ಟೀ ಚಮಚ ತೆಂಗಿನತುರಿ
1 ದೊಡ್ಡ ಟೊಮೆಟೊ
ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ
 
ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು, ಅರಿಶಿನ ಪುಡಿ, ಖಾರ ಪುಡಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಿಸಿರಿ ಮತ್ತು ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಲವಂಗದ ಎಲೆ, ಚಕ್ಕೆ ತುಂಡು, ಲವಂಗ, ಪುಡಿಮಾಡಿದ ಕಾಳುಮೆಣಸು ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಬಾಡಿಸಿ. ಅದಕ್ಕೆ ತೆಂಗಿನಕಾಯಿಯ ತುರಿಯನ್ನು ಸೇರಿಸಿ. ಬಣ್ಣ ಬದಲಾಗುವವರೆಗೆ ಹುರಿಯಿರಿ ನಂತರ ಅದಕ್ಕೆ ಟೊಮ್ಯಾಟೊ ಸೇರಿಸಿ 10 ನಿಮಿಷದವರೆಗೆ ಬೇಯಿಸಿ.
 
ಬೇಯಿಸಿದ ಆ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಮೊದಲೇ ಮಿಶ್ರಣ ಮಾಡಿರುವ ಚಿಕನ್ ಅನ್ನು ಹಾಕಿ ಕಡಿಮೆ ಉರಿಯಲ್ಲಿ 15-20 ನಿಮಿಷ ಬೇಯಿಸಿ ನಂತರ ಅದಕ್ಕೆ ರುಬ್ಬಿದ ಮಸಾಲೆ, ಸ್ವಲ್ಪ ನೀರು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬಾಡಿಸಿದರೆ ಕೊಲ್ಲಾಪುರಿ ಚಿಕನ್ ಮಸಾಲಾ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ