ಬೆಂಗಳೂರು : ಹೆಸರುಬೇಳೆ ಆರೋಗ್ಯಕ್ಕೆ ಉತ್ತಮವಾಗಿದ್ದರಿಂದ ಇದರಿಂದ ಲಡ್ಡು ತಯಾರಿಸಿ ಮಕ್ಕಳಿಗೆ ನೀಡಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಹೆಸರುಬೇಳೆ, ½ ಕಪ್ ಬೆಲ್ಲ, 5 ಏಲಕ್ಕಿ, 10 ಚಮಚ ತುಪ್ಪ
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹುರಿದುಕೊಂಡು ತಣ್ಣಗಾದ ಮೇಲೆ ಪುಡಿ ಮಾಡಿ. ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಹಾಕಿ ಮತ್ತೆ ರುಬ್ಬಿಕೊಳ್ಳಿ. ಅದಕ್ಕೆ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಲಡ್ಡು ತಯಾರಿಸಿ.