ಟೊಮೆಟೋ ರೈಸ್ ಈ ರುಚಿಯನ್ನು ಎಂದಿಗೂ ಮರೆಯಲಾಗದು!

ಶುಕ್ರವಾರ, 29 ಅಕ್ಟೋಬರ್ 2021 (08:06 IST)
ಈ ಡೈಲೀ ರೂಟೀನ್‍ನಲ್ಲಿ ಎಲ್ಲರಿಗೂ ಪ್ರತಿದಿನ ಮಾಡುವ ತಿಂಡಿ ಏನುಮಾಡಬೇಕೆಂದು ಚಿಂತೆಯಾಗಿರುತ್ತದೆ.
ನಿಮ್ಮ ದಿನವನ್ನು ಫ್ರೆಷ್ ಮಾಡಲು ಈ ಟೋಮೊಟೋ ಬಾತ್ ರೆಸಿಪಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಮನೆಯಲ್ಲಿ ಈ ಹೊಸ ಬಗೆಯ ತಿಂಡಿಯನ್ನು ಟ್ರೈ ಮಾಡಿ.
ರುಚಿಕರವಾದ ಟೊಮೆಟೋ ರೈಸ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
•ಎಣ್ಣೆ-4-5 ಚಮಚ
•ಚಕ್ಕೆ- 2
•ಲವಂಗ-4
•ಏಲಕ್ಕಿ-2
•ಪಲಾವ್ ಎಲೆ- 2-3ತುಪ್ಪ-ಸ್ವಲ್ಪ
•ಈರುಳ್ಳಿ-1
•ಪುದೀನಾ-ಸ್ವಲ್ಪ
•ಉಪ್ಪು-ರುಚಿಗೆ ತಕ್ಕಷ್ಟು
•ಟೊಮೆಟೋ- 2-3
•ಬಟಾಣಿ- ಒಂದು ಸಣ್ಣ ಬಟ್ಟಲು
•ಖಾರದ ಪುಡಿ- 1 ಚಮಚ
•ಅರಿಶಿನದ ಪುಡಿ- ಸ್ವಲ್ಪ
•ಗರಂ ಮಸಾಲಾ- ಅರ್ಧ ಚಮಚ
•ಅಕ್ಕಿ- 1 ಬಟ್ಟಲು
•ನೀರು- ಒಂದೂವರೆ ಬಟ್ಟಲು
ಮಾಡುವ ವಿಧಾನ...
•ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ ಹಾಕಿ ಕಾಯಲು ಬಿಡಿ.
•ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಬಟಾಣಿ, ಟೊಮೆಟೋ, ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ.
•ಕೆಂಪಗಾದ ಬಳಿಕ ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿಸ, ಗರಂ ಮಸಾಲಾ, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಟೊಮೆಟೋ ರೈಸ್ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ