ಕಡಲೆಕಾಯಿ ಬೆಣ್ಣೆ ಉಪಯೋಗಿಸಿದ್ದೀರಾ? ವಿಡಿಯೋ ವೀಕ್ಷಿಸಿ

ಬುಧವಾರ, 22 ಜೂನ್ 2016 (12:44 IST)
ಕಡಲೆಕಾಯಿಯನ್ನು ನಮ್ಮ ಆಹಾರದಲ್ಲಿ ಉಪಯೋಗಿಸುತ್ತೇವೆ. ಆದ್ರೆ ಅದೇ ಕಡಲೇಕಾಯಿಂದ ಬೆಣ್ಣೆ ತಯಾರಿಸಬಹುದು. ರುಚಿ ರುಚಿಯಾಗಿರುವ- ಕೆನೆಯಂತಿರುವ ಬೆಣ್ಣೆಯನ್ನು ಬ್ರೇಕ್‌ಫಾಸ್ಟ್, ಊಟದಲ್ಲೂ ಸಹ ಬಳಕೆ ಮಾಡಬಹುದು. ಸಿಂಪಲ್ ಆಗಿರುವ ಬೆಣ್ಣೆ ಇದು ನಿಮ್ಮ ಡಯಟ್ ಹಾಗೂ ಪೋಷಕಾಂಶಗಳನ್ನು ನೀಡುವಲ್ಲಿ ಸಹಾಯ ಮಾಡಬಲ್ಲದ್ದು. ಕಡಲೇಕಾಯಿ ಪ್ರಿಯರಿಗಾಗಿ ಬೆಣ್ಣೆಯ ಬಗ್ಗೆ ಹೇಗೆ ಬಳಕೆ ಮಾಡಬಹುದು. ಯಾವ ಆಹಾರದ ಜತೆಗೆ ತಿಂದ್ರೆ ಇದು ಉತ್ತಮ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
 
 
ಕಡಲೆಕಾಯಿ ಪೇಸ್ಟ್‌ಯಿಂದ ನಿಮ್ಮ ಸ್ನಾಯುಗಳನ್ನು ಬಲಪಡಿಸಬಲ್ಲದ್ದು. ಅಲ್ದೇ ಕೊಬ್ಬನ್ನು ಕರಗಿಸುವ ಅಂಶ ಈ ಪೇಸ್ಟ್‌ನಲ್ಲಿದೆ. ಫಿಟ್ನೆಸ್‌ಗಾಗಿ ಕಡಲೆಕಾಯಿ ಪೇಸ್ಟ್‌ನ್ನು ಕೂಡ ಉಪಯೋಗಿಸಬಹುದಾಗಿದೆ. 
 
ನಿಮ್ಮ ಆರೋಗ್ಯ ರಕ್ಷಣೆಯಲ್ಲಿ ಕಡಲೆಕಾಯಿ ಬೆಣ್ಣೆ ಉತ್ತಮ ಮದ್ದು.. ಆರೋಗ್ಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಇದು ಪರಿಣಾಮವನ್ನುಂಟುಮಾಡಬಲ್ಲದ್ದು. ಅಲ್ಲದೇ ಬ್ರೇಡ್ ಜತೆಗೆ ಈ ಬೆಣ್ಣೆಯನ್ನು ಸೇವಿಸಿದ್ರೆ ಬಲು ರುಚಿಯಾಗಿರುತ್ತದೆ.
 
ಕಡಲೆಕಾಯಿ ಬೆಣ್ಣೆಯಿಂದ ವಿವಿಧ ಉಪಯೋಗಗಳನ್ನು ಪಡೆಯಬಹುದಾಗಿದೆ. ನಿಮ್ಮ ನಿತ್ಯ ಜೀವನದಲ್ಲಿ ಅಡುಗೆ ಅಥವಾ ಆಹಾರದಲ್ಲಿ ಕಡಲೆಕಾಯಿ ಬೆಣ್ಣೆ ಉಪಯೋಗಿಸಿ, ಅದರಿಂದಾಗುವ ಫಲಿತಾಂಶ ನಿಮಗೆ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ