ಸಾವಿರ ಮಡಕೆ ಸೇವೆಗೆ ಹೆಸರಾದ ಗುಡ್ಡಟ್ಟು ವಿನಾಯಕ ಮಂದಿರ

ಗುರುವಾರ, 23 ಜೂನ್ 2016 (19:31 IST)
800 ವರ್ಷಗಳಷ್ಟು ಪ್ರಾಚೀನವಾದ ಗುಡ್ಡಟ್ಟು ವಿನಾಯಕ ಮಂದಿರವು ರಾಷ್ಟ್ರೀಯ ಹೆದ್ದಾರಿ 66ರಿಂದ 10 ಕಿಮೀ ದೂರವಿದ್ದು ಮಂಗಳೂರು ಪಟ್ಟಣದಿಂದ 90 ಕಿಮೀ ದೂರವಿದೆ.  ಮಲಗಿದ ಆನೆಯಂತೆ ಕಾಣುವ ಬೃಹತ್ ಗ್ರಾನೈಟ್ ಕಲ್ಲಿನ ಕೆಳಗಿರುವ ವಿನಾಯಕನ ಮುಖ್ಯ ಮೂರ್ತಿಯು ತಾನೇತಾನಾಗಿ ಉದ್ಭವಿಸಿದೆಯೆಂದು ನಂಬಲಾಗಿದೆ.  

ಗುಡ್ಡಟ್ಟು ವಿನಾಯಕ ಮಂದಿರವು ಅಯರ್‍‌ಕೋಡಾ ಸೇವೆಗೆ( ಸಾವಿರ ಮಡಕೆ ಸೇವೆಗೆ) ಜನಪ್ರಿಯವಾಗಿದೆ. ಈ ಆಚರಣೆಯಲ್ಲಿ ಗರ್ಭಗೃಹವನ್ನು ಒಣಗಿಸಿ ಮೂರ್ತಿಯ ಮೇಲೆ ಮಂದಿರದ ಬಾವಿಯಿಂದ ಸಾವಿರಾರು ಮಡಕೆ ನೀರನ್ನು ಅಭಿಷೇಕ ಮಾಡಲಾಗುತ್ತದೆ. ಗುಹೆಯೊಳಗಿರುವ ಗರ್ಭಗೃಹದಿಂದ ನೀರು ಹರಿದುಬರುವ ತನಕ ಈ ಜಲಾಭಿಷೇಕ ನಡೆಯುತ್ತದೆ.

 ಈ ಆಚರಣೆ ಭಕ್ತರಿಗೆ ಅದೃಷ್ಟ ತರುತ್ತದೆಂದು ನಂಬಲಾಗಿದೆ. ಇತರೆ ಜನಪ್ರಿಯ ಆಚರಣೆಗಳು ಗಣಹೋಮ, ಪಂಚಕಜ್ಜಾಯ, ಮುಡೈಕಿ ಕಡಬು ಮತ್ತಿತರ ಆಚರಣೆಗಳು. ಈ ಮಂದಿರಕ್ಕೆ ಸಾರಿಗೆ ಬಸ್ಸುಗಳ ಸಂಚಾರ ಕಡಿಮೆಯಿದ್ದರೂ ಕೆಲವು ಬಸ್ಸು ಮತ್ತು ಆಟೊಗಳು ಲಭ್ಯವಿದ್ದು, ಖಾಸಗಿ ವಾಹನಗಳಲ್ಲಿ ಕೂಡ ಭಕ್ತರು ಬರುತ್ತಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ