ಟಿಟಿಡಿ: ಶ್ರೀವಾರಿ ಆಲಯದಲ್ಲಿ ಇಂದು ಮಹಾ ಕುಂಭಾಭಿಷೇಕ

ಬುಧವಾರ, 13 ಮಾರ್ಚ್ 2019 (13:49 IST)
ಜ್ಯುಬಿಲಿಹಿಲ್ಸ್ ಟಿಟಿಡಿ ಹೊಸದಾಗಿ ನಿರ್ಮಿಸಿದ ಶ್ರೀವೆಂಕಟೇಶ್ವರಸ್ವಾಮಿ ಆಲಯ ಪ್ರತಿಷ್ಠಾಪನ ಮಹೋತ್ಸವವು ಇಂದು ನಡೆಯಲಿದೆ. ಈ ಸಂದರ್ಭದಲ್ಲಿ ಆಲಯದಲ್ಲಿ ಮಹಾಕುಂಭಾಭಿಷೇಕವನ್ನು ನೆರವೇರಿಸುತ್ತಿದ್ದಾರೆ. ಮೀನ ಲಗ್ನದಲ್ಲಿ ಈ ಮಹಾಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.


ಈ ಸಮಯದಲ್ಲಿ ಉತ್ಸವ ವಿಗ್ರಹಗಳಿಗೆ ಅಂಕುರಾರ್ಪಣೆ ಮಾಡುತ್ತಾರೆ. ಸಾಯಂಕಾಲ 6ರಿಂದ 9 ಗಂಟೆಯ ತನಕ ಆಚಾರ್ಯ ಋತ್ವಿಕವರ್ಣ, ಮೃತ್ಸಂಗ್ರಹಣ, ಅಂಕುರಾರ್ಪಣೆ, ವೇದಾರಂಭ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ. ಮಾರ್ಚ್ 9 ರಂದು ಬೆಳಿಗ್ಗೆ ಯೋಗಶಾಲ ವಾಸ್ತು, ಪಂಚಗಮ್ಯ ಪ್ರಸನ್ನ, ರಕ್ಷಾಬಂಧನ, ಅಕಲ್ಮಷ ಪ್ರಾಯಶ್ಚಿತ ಹೋಮ, ಅಕ್ಷಿನ್ಮೋಚನ, ಭೀಮಶುದ್ಧಿ, ಪಂಚಗವ್ಯಾಧಿವಾಸ, ಸಾಯಂಕಾಲ ಅಗ್ನಿಪ್ರತಿಷ್ಠ, ಕುಂಭಾವಾಹನ, ಕುಂಭಾರಾಧನೆ, ಹೋಮಗಳು, ಪೂರ್ಣಾಹುತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
 
ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ 12 ಗಂಟೆಯ ತನಕ ಹೋಮಂ, ಕ್ಷೀರಾಧಿವಾಸ, ಪೂರ್ಣಾಹುತಿ, ಸಾಯಂಕಾಲ 6 ರಿಂದ 8ಗಂಟೆಯ ತನಕ ಹೋಮ, ಪೂರ್ಣಾಹುತಿ ನಿರ್ವಹಿಸಿದ್ದಾರೆ. ಮಾರ್ಚ್ 11 ಬೆಳಿಗ್ಗೆ ಹೋಮ, ಜಲಧಿವಾಸ, ಪೂರ್ಣಾಹುತಿ, 12 ರಿಂದ 2 ಗಂಟೆಯ ತನಕ ಬಿಂಬಸ್ಥಾಪನೆ, 6ರಿಂದ 8ಗಂಟೆಯ ತನಕ ಹೋಮ, ಪೂರ್ಣಾಹುತಿ ನೆರವೇರಿಸಲಾಗಿದೆ.
 
ತದನಂತರ ಬ್ರಹ್ಮಘೋಷ, ವೇದಶಾತ್ತುಮುರ, ಧ್ವಜಾರೋಹಣ, ಅರ್ಚಕ ಬಹುಮಾನ, ನಿತ್ಯ ಮಂತ್ರಪಠಣೆಗಳನ್ನು ಮಾಡುತ್ತಾರೆ. ಆನಂತರ ಸಾಯಂಕಾಲ 4 ಗಂಟೆಯ ತನಕ ಸರ್ವದರ್ಶನಕ್ಕಾಗಿ ಭಕ್ತರಿಗೆ ಅನುಮತಿ ನೀಡಲಾಗುತ್ತದೆ. ಅದೇ ದಿನ ಸಾಯಂಕಾಲದ ತನಕ ಶ್ರೀನಿವಾಸ ಕಲ್ಯಾಣ, ಉತ್ಸವಮೂರ್ತಿಗಳ ಮೆರವಣಿಗೆ, ಧ್ವಜಾರೋಹಣ, ನಿತ್ಯಮಂತ್ರೋಪಠಣೆ, ಸರ್ವದರ್ಶನ ಏಕಾಂತ ಸೇವೆ ಜರಗುತ್ತದೆ.
 
ಹೈದರಾಬಾದ್ ಟಿಟಿಡಿ ನಿರ್ಮಿಸಿದ ಎರಡನೇ ಆಲಯವಿದು. ಜ್ಯೂಬ್ಲಿಹಿಲ್ಸ್ ರೋಡ್ ಸಂ.92ರಲ್ಲಿ ರೂ. 28 ಕೋಟಿ ವೆಚ್ಚದಲ್ಲಿ 2016 ಆಗಸ್ಟ್ 10 ರಂದು ಈ ಆಲಯ ನಿರ್ಮಾಣಕ್ಕೆ ಶ್ರೀಕಾರ ಮಾಡಲಾಗಿತ್ತು. ಸುಮಾರು ಮೂರುವರೆ ಎಕರೆ ಜಮೀನಿನಲ್ಲಿ ಸುಮಾರು ರೂ.17 ಕೋಟಿ ಟಿಟಿಡಿ ನಿಧಿಯಲ್ಲಿ ಶ್ರೀವಾರಿ ಆಲಯವನ್ನು ನಿರ್ಮಾಣ ಮಾಡಿದ್ದಾರೆ. ಉಳಿದ 6 ಕೋಟಿಯಲ್ಲಿ ಹೆದ್ದಾರಿಗಳು, ಪಾರ್ಕಿಂಗ್, ಅರ್ಚಕರ ನಿವಾಸಗಳು, ಇತರ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ