ಕೋತಿಗೆ ತಿಥಿ ಮಾಡಿ ಊರಿಗೆ ಊಟ ಹಾಕಿಸಿದ್ರು

ಗುರುವಾರ, 24 ಮೇ 2018 (18:18 IST)
ಮನುಷ್ಯ ಸತ್ತರೆ ತಿಥಿ ಮಾಡುವುದು ಸಹಜ ...ಜೊತೆಗೆ ಸೂತಕ ಕಳೆದುಕೊಳ್ಳಲು ತಿಥಿ ಮಾಡುವುದು ಹಿಂದೂ ಸಂಪ್ರದಾಯ !? ಅದರೆ ಈ ಊರಿನ ಜನ ಮಾತ್ರ ಕೋತಿ ಸತ್ತ ಕಾರಣಕ್ಕೆ  ಅರ್ಚಕರನ್ನು ಕರೆಸಿ ಶಾಸ್ತ್ರೀ ಆಪ್ತವಾಗಿ ಮಣ್ಣು ಮಾಡಿದ್ದು ವಿಶೇಷ. 
ಅದು ಮಾತ್ರವಲ್ಲದೇ  ಕೋತಿ ಸತ್ತ ಹನ್ನೊಂದು ದಿನಕ್ಕೆ ತಿಥಿ ಮಾಡಿ ಊರಿನ ಗ್ರಾಮಸ್ಥರಿಗೆಲ್ಲ ಅಡುಗೆ ಮಾಡಿಸಿ  ಊಟವನ್ನು ಹಾಕಿದರು ಇಂತಹ ಅಪರೂಪದ ದೃಶ್ಯ ಕಂಡಿಬಂದಿರುವುದು ಎಲ್ಲಿ .!? ಅಂತೀರಾ .ಈ ಸ್ಟೋರಿ ನೋಡಿ... ಒಂದು ಕಡೆ ಪೂಜೆ ಮಾಡುತ್ತಿರುವ ಭಕ್ತಾಧಿಗಳು, ಮತ್ತೊಂದು ಕಡೆ ಊಟ ಮಾಡಿತ್ತಿರುವ ಜನರು. 
ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಆನೇಕಲ್ ನ ಹೊರವಲಯ ಕುವೆಂಪು ನಗರದಲ್ಲಿ .. ಹೌದು ಕಳೆದ ಮೂರು ವರ್ಷಗಳಿಂದ ಈ ಗ್ರಾಮದಲ್ಲಿ ವಾಸವಾಗಿದ್ದ ಕೋತಿಯೊಂದು  ಎಲ್ಲಾರಿಗೂ  ಅಚ್ಚು ಮೆಚ್ಚಿನ ಕೋತಿಯಾಗಿತ್ತು. ಅಲ್ಲದೇ ಈ ಕೋತಿಗೆ ನಾಯಿ  ಜೊತೆಗೆ ಸ್ನೇಹವಿತ್ತು ಆದರೆ ವಿಧಿಯಾಟ ಕಳೆದ 11 ದಿನಗಳ ಹಿಂದೆ  ಬೇರೆ ಊರಿನ ನಾಯಿಗಳ ಗುಂಪೊಂದು ಕೋತಿಯನ್ನು  ಕಚ್ಚಿ  ತೀವ್ರವಾಗಿ ಗಾಯಗೊಳಿಸಿತ್ತು ಅಂದೆ ಆ ಕೋತಿಯು  ಸಾವಿಗೀಡಾಗಿತ್ತು. 
 
ಇದರಿಂದ  ಇಲ್ಲಿನ ಜನ ತಮ್ಮ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡ  ರೀತಿಯಲ್ಲಿ ಕೋತಿಗೆ ಮನಷ್ಯನ ಶವ ಸಂಸ್ಕಾರದ ರೀತಿಯಲ್ಲಿಯೇ ಕೋತಿಗೂ ಸಹ ಅದೆ ರೀತಿಯ ವಿಧಿವಿಧಾನಗಳನ್ನು ಮಾಡಬೇಕು ಎಂದು ಊರಿನ‌ ಗ್ರಾಮಸ್ಥರು ನಿರ್ಧರಿಸಿ  ಅಂತಿಮ‌ಸಂಸ್ಕಾರ ಮಾಡಿದರು. ಇನ್ನು ಕೋತಿ ಊರಿನ ಮನೆ ಮಗನಾಗಿ ಬೆಳೆದಿತ್ತು ಮನೆಯಲ್ಲಿ ಮಗುವನ್ನು ಹೇಗೆ ನೋಡ್ತರೇ ಆ ರೀತಿ ನೋಡಿಕೊಂಡಿದರು ..ಇನ್ನು ಹೊರಗಿನಿಂದ ಬಂದ ಜನರಿಗೆ ಅಚ್ಚರಿ ಮುಡಿಸಿತ್ತು ಈ ಕೋತಿ.
 ಒಟ್ನಲ್ಲಿ ಮನುಷ್ಯನನ್ನ ಮನುಷ್ಯ ನಾಗಿ ನೋಡದೆ  ಇರುವ  ಸಮಾಜದಲ್ಲಿ ಮನುಷ್ಯ ರೀತಿಯಲ್ಲಿದ್ದ ಪ್ರಾಣಿಗೆ  ಈ ಊರಿನ ಜನ ಗೌರವ ನೀಡಿದ್ದು ವಿಶೇಷ ಇದು ಮನುಕುಲಕ್ಕೆ ಒಂದು ಮಾದರಿ‌ ಸಂಗತಿ ಅದರೆ ಕೋತಿಯನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಮನೆಯ ಕುಟುಂಬದ ಸದಸ್ಯನನ್ನು ಕಳೆದುಕೊಂಡತ್ತ ರೀತಿಯಲ್ಲಿ ಕಣ್ಣೀರಿಡುತ್ತಿದ್ದರೆ ಇನ್ನು ತನ್ನ ಒಳ್ಳೆಯ ಗೆಳೆಯನನ್ನು ಕಳೆದು ಕೊಂಡ ನಾಯಿ ಗ್ರಾಮದಲ್ಲಿ ಒಂಟಿಯಾಗಿ ಓಡಾಡುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ