ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?

2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ನೋಟ ನೀಮಗಾಗಿ.
ಕತ್ರಿನಾ ಕೈಫ್ :
IFM
ಲಂಡನ್ ಮೂಲದ ಕತ್ರಿನಾ ಬಾಲಿವುಡ್ ರಾಣಿಯಾಗಿ ಮೆರೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಕಳೆದ ವರ್ಷದ ಪಾಟನರ್, ವೆಲ್‌ಕಂ, ನಮಸ್ತೆ ಲಂಡನ್ ಮುಂತಾದ ಹಿಟ್ ಚಿತ್ರಗಳ ಪಟ್ಟಿಯನ್ನು 2008ರಲ್ಲೂ ಮುಂದುವರೆಸಿದ ಕತ್ರಿನಾ ವರ್ಷದ ಅತಿ ದೊಡ್ಡ ಹಿಟ್ ಆಗಿ ಮೊದಲನೇ ಸ್ಥಾನದಲ್ಲಿರುವ ಸಿಂಗ್ ಈಸ್ ಕಿಂಗ್ ಮತ್ತು ಎರಡನೇ ಸ್ಥಾನದಲ್ಲಿರುವ ರೇಸ್‌ನಲ್ಲಿ ನಟಿಸಿದ್ದಾರೆ. ಆದರೆ ರಿಯಲ್ ಲೈಫ್ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರೊಂದಿಗೆ ಅವರು ನಟಿಸಿದ ಯುವರಾಜ್ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ಗೆಲ್ಲುವುದಕ್ಕೆ ವಿಫಲವಾಯಿತು. ಅಲ್ಲದೇ ಈ ವರ್ಷ ಕತ್ರಿನಾರಿಗೆ ಹಲವಾರು ಪ್ರಶಸ್ತಿಗಳೂ ಒಲಿದಿವೆ. ಎಫ್‌ಎಚ್ಎಂನ ಪೋಲ್‌ನಲ್ಲಿ ವಿಶ್ವದಲ್ಲಿ ಭಾರತದ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ ಕತ್ರಿನಾರಿಗೆ ಮೊದಲ ಸ್ಥಾನ. ಸಿನಿ ಝಿ ಅವಾರ್ಡ್‌ನಲ್ಲಿ ಬ್ರಿಟಿಷ್-ಇಂಡಿಯನ್ ಆಕ್ಟರ್ ಪ್ರಶಸ್ತಿ ಮತ್ತು ಐಐಎಫ್‌ಎ ಅವಾರ್ಡ್‌ನಲ್ಲಿ ಬೆಸ್ಟ್ ಫೀಮೇಲ್ ಸ್ಟೈಲ್ ಐಕಾನ್ ಪ್ರಶಸ್ತಿಗಳು ಕತ್ರಿನಾರ ಗರಿಮೆ ಹೆಚ್ಚಿಸಿವೆ.

ಪ್ರಿಯಾಂಕ ಚೋಪ್ರಾ:
IFM

ಪ್ರಿಯಾಂಕರಿಗೆ 2008ರ ಆರಂಭದ ದಿನಗಳು ಕಹಿ ಎನಿಸಿದರೆ, ಕೊನೆಯ ದಿನಗಳು ಯಶಸ್ಸಿನ ಉತ್ತುಂಗಕ್ಕೇರಿಸಿವೆ. ಮೈ ನೇಮ್ ಈಸ್ ಅಂತೋನಿ ಗಾನ್‌ಸಾಲ್ವೆಸ್, ಲವ್‌ಸ್ಟೋರಿ 2050, ಗಾಡ್ ತೂಸಿ ಗ್ರೇಟ್ ಹೊ, ಚಮಕು, ದ್ರೋಣ, ಫ್ಯಾಶನ್ ಮತ್ತು ದೋಸ್ತಾನ ಪ್ರಿಯಾಂಕರ ಈ ವರ್ಷದ ಬಿಡುಗಡೆಗಳು. ಇವುಗಳಲ್ಲಿ ಫ್ಯಾಶನ್ ಮತ್ತು ದೋಸ್ತಾನ ಅದ್ಭುತ ಯಶಸ್ಸು ಕಂಡರೆ ಉಳಿದೆಲ್ಲಾ ಚಿತ್ರಗಳು ತೋಪಾದವು. ಫ್ಯಾಶನ್ ಚಿತ್ರದಲ್ಲಿ ಪ್ರಿಯಾಂಕರ ಅಭಿನಯ ಕಲೆ ಹೊರಸೂಸಿದರೆ, ದೋಸ್ತಾನ ಚಿತ್ರದಲ್ಲಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡರು. ಈ ನಡುವೆ ಲವ್‌ಸ್ಟೋರಿ 2050ಯಲ್ಲಿ ಪ್ರಿಯಾಂಕ ಎದುರು ನಾಯಕರಾಗಿ ಬಾಲಿವುಡ್ ಡೆಬ್ಯೂಟ್ ಮಾಡಿದ ಹರ್‌ಮಾನ್‌ ಬೆವಜಾ ಜೊತೆ ಪ್ರಿಯಾಂಕ ಅಫೇರ್ ಹೊಂದಿರುವುದಾಗಿಯೂ ಗುಸುಗುಸು ಕೇಳಿಬಂದಿತ್ತು.

ಕರೀನಾ ಕಪೂರ್:
IFM
ಕಳೆದ ವರ್ಷ ಜಬ್ ವಿ ಮೆಟ್ ಮತ್ತು ಶಾಹಿದ್‌ ಕಪೂರ್‌ಗೆ ಕೈ ಕೊಟ್ಟು ಸುದ್ದಿ ಮಾಡಿದ್ದ ಕರೀನಾ ಕಪೂರ್ 2008ರಲ್ಲಿ ತಮ್ಮ ಚಿತ್ರಗಳಿಗಿಂತ ಸೈಫ್ ಅಲಿಖಾನ್ ಕೈ ಹಿಡಿದುಕೊಂಡು ಸುತ್ತುವುದರ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದರು. ಈ ಬಾರಿ ಬಹುತಾರಗಣ ಚಿತ್ರ ಗೋಲ್‌ಮಾಲ್ ರಿಟರ್ನ್ಸ್ ಬಿಟ್ಟರೆ ಹೇಳಿಕೊಳ್ಳವಂತಹ ಯಶಸ್ಸೇನು ಕರೀನಾಗೆ ಒಲಿದಿಲ್ಲ. ತನ್ನ ಒಲವಿನರಸ ಸೈಫ್ ಜೊತೆ ಅವರು ನಟಿಸಿದ ತಶಾನ್ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಈ ವರ್ಷ ಅವರು ನಟಿಸಿದ ಹಲ್ಲಾ ಬೋಲ್ ಮತ್ತು ರೋಡ್‌ಸೈಡ್ ರೋಮಿಯೊ(ಅನಿಮೇಟೆಡ್ ಚಿತ್ರ, ಧ್ವನಿ ನೀಡಿದ್ದರು) ಸಹ ನೆಲಕಚ್ಚಿದವು. ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದರೂ ಕರೀನಾ ಈಗಲೂ ನಿರ್ಮಾಪಕರ ನೆಚ್ಚಿನ ಆಯ್ಕೆ.

ಐಶ್ವರ್ಯಾ ರೈ:
IFM

2008ರ ವರ್ಷದಲ್ಲಿ ಐಶ್ವರ್ಯ ರೈ ಬಚ್ಚನ್ ನಟಿಸಿದ ಎರಡು ಚಿತ್ರಗಳಷ್ಟೇ ಬಿಡುಗಡೆಯಾಗಿದ್ದು, ಎರಡೂ ಹಿಟ್ ಎನಿಸಿಕೊಂಡಿವೆ. ಜೋಧಾ ಅಕ್ಬರ್‌ ಚಿತ್ರದಲ್ಲಿ ರಜಪೂತ್ ರಾಜಕುಮಾರಿಯ ಪಾತ್ರಕ್ಕೆ ಐಶ್ವರ್ಯ ತಮ್ಮ ನಟನೆ, ಗಾಂಭಿರ್ಯ ಮತ್ತು ಪಾತ್ರಕ್ಕೆ ತಕ್ಕಂತಹ ಸ್ವರಮಾಧುರ್ಯದೊಂದಿಗೆ ಜೀವತುಂಬಿದ್ದರು. ಸರಕಾರ್ ರಾಜ್‌ನಲ್ಲಿ ಮಾವ ಅಮಿತಾಭ್ ಬಚ್ಚನ್ ಮತ್ತು ಪತಿ ಅಭಿಷೇಕ್ ಜೊತೆ ಕಾಣಿಸಿಕೊಂಡರು. ಬಿಗ್ ಬಿ ಕುಟುಂಬ ವಲ್ಡ್ ಟೂರ್ ವಿಷಯದಲ್ಲೂ ಸಾಕಷ್ಟು ಸುದ್ದಿಯಲ್ಲಿತ್ತು. 2007ರಲ್ಲಿ ಜೂನಿಯರ್ ಬಿಯನ್ನು ವರಿಸಿ ಬಚ್ಚನ್ ಕುಟುಂಬ ಸೇರಿದ್ದ ಐಶ್ವರ್ಯ ಬಗ್ಗೆ ಜಯಾ ಮತ್ತು ಅಮಿತಾಬ್ ಹೊಗಳಿಕೆಯ ಹೊಳೆ ಹರಿಸುತ್ತಾರೆ. ಅತ್ತೆ-ಮಾವನ ಮುದ್ದಿನ ಸೊಸೆಯೆನಿಸಿರುವ ಐಶ್ ಚಿತ್ರರಂಗದಲ್ಲೂ ಗೆಲುವಿನ ನಗೆ ಬೀರುವುದನ್ನು ಮುಂದುವರೆಸಿದ್ದಾರೆ.

ಕಂಗನಾ ರಾಣವತ್:
IFM
2008ರಲ್ಲಿ ಬಿಡುಗಡೆಯಾದ ಕಂಗಾನಾರ ಏಕೈಕ ಚಿತ್ರ ಫ್ಯಾಶನ್. ಈ ಚಿತ್ರದಲ್ಲಿ ಕಂಗಾನಾ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ನಡುವೆ ತಮಿಳುನಲ್ಲಿ ಕಾಣಿಸಿಕೊಂಡ ಅವರು ಧಾಮ್‌ಧೂಮ್ ಎಂಬ ಚಿತ್ರದಲ್ಲಿ ನಟಿಸಿದರು, ಈ ಚಿತ್ರವೂ ಹಿಟ್ ಎನಿಸಿಕೊಂಡಿದೆ. ನಟಿಸಿದ ಎರಡೂ ಚಿತ್ರಗಳೂ ಹಿಟ್ ಎನಿಸುವ ಮೂಲಕ ಕಂಗಾನಾಗಿದು ಯಶಸ್ವಿ ವರ್ಷ. ಈ ನಡುವೆ ಕಂಗನಾ ಪ್ರಸ್ತುತ ಚಿತ್ರೀಕರಣ ನಿರತರಾಗಿರುವ ರಾಜ್-ದ ಮಿಸ್ಟರಿ ಕಂಟಿನ್ಯೂಸ್ ಚಿತ್ರದ ನಾಯಕರಲ್ಲಿ ಒಬ್ಬರಾದ, ಈ ಹಿಂದೆ ಹಾಲೆ ದಿಲ್ ಚಿತ್ರದಲ್ಲಿ ನಟಿಸಿದ್ದ ಅಧ್ಯಯನ ಸುಮನ್ ಎಂಬ ನಟನೊಂದಿಗೆ ಕಂಗನಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವಿದ್ಯಾ ಬಾಲನ್ :
IFM

ವಿದ್ಯಾ ಬಾಲನ್‌ ಈ ವರ್ಷ ನಟಿಸಿದ ಎರಡು ಚಿತ್ರಗಳು ಹಲ್ಲಾ ಬೋಲ್ ಮತ್ತು ಕಿಸ್ಮತ್ ಕೊನೆಕ್ಷನ್. ಆದರೆ ಈ ಎರಡೂ ಚಿತ್ರಗಳೂ ಬಾಕ್ಸ್‌ ಅಫೀಸ್‌ನಲ್ಲಿ ಸೋತಿವೆ. ಕಿಸ್ಮಕ್ ಕೊನೆಕ್ಷನ್, ವಿದ್ಯಾ ಎದುರು ನಾಯಕನಾಗಿದ್ದ ಭಗ್ನಪ್ರೇಮಿ ಶಾಹಿದ್ ಕಪೂರ್ ಜೊತೆ ವಿದ್ಯಾ ಹೆಸರು ಕೇಳಿಬಂದಿತ್ತು. ಆದರೆ ವಿದ್ಯಾ ನಟಿಸಿದ ಹೆಚ್ಚಿನ ಎಲ್ಲಾ ನಾಯಕ ನಟರ ಜೊತೆ ಅವರ ಹೆಸರು ಕೇಳಿಬಂದಿರುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ.

ದೀಪಿಕಾ ಪಡುಕೋಣೆ:
IFM
ಓಂ ಶಾಂತಿ ಓಂ ಹುಡುಗಿ ದೀಪಿಕಾ ಪಡುಕೋಣೆಗೆ 2007ರ ಡೆಬ್ಯೂಟ್ ಚಿತ್ರಕ್ಕಾಗಿ ಪ್ರಶಸ್ತಿಗಳ ಮಹಾಪೂರವೇ 2008ರಲ್ಲಿ ಹರಿದು ಬಂತು. ಜೊತೆಗೆ ಅವರು ನಟಿಸಿದ ಬಚನಾ ಎ ಹಸೀನೊ ಚಿತ್ರ ಸಹ ಹಿಟ್ ಎನಿಸಿದೆ. ಬಚ್‌ನಾ ನಾಯಕ ರಣ್‌ಬೀರ್ ಕಪೂರ್‌ರೊಂದಿಗೆ ದೀಪಿಕಾ ಅಫೇರ್ ಹೊಂದಿದ್ದಾರೆ. ಇದೇ ವಿಷಯಕ್ಕೆ ಹೆಚ್ಚು ಸುದ್ದಿಯಲ್ಲಿದ್ದರು.

ರಾಣಿ ಮುಖರ್ಜಿ :
IFM

ಬಾಲಿವುಡ್ ಮೇಲೆ ರಾಣಿ ರಾಜ್ಯಭಾರ ಕೊನೆಗೊಂಡಿದೆ. ಈ ವರ್ಷದ ಅವರ ಬಿಡುಗಡೆ ತೋಡಾ ಪ್ಯಾರ್ ತೋಡಾ ಮ್ಯಾಜಿಕ್ ಯಶಸ್ವಿಯಾಗಲಿಲ್ಲ. ರಾಣಿ ಅಷ್ಟರ ಮಟ್ಟಿಗೆ ಪ್ರಚಾರದಲ್ಲೂ ಇಲ್ಲ. ಪ್ರಸ್ತುತ ಶಾಹಿದ್‌ರೊಂದಿಗಿನ ಚಿತ್ರವೊಂದರ ಚಿತ್ರೀಕರಣದಲ್ಲಿ ರಾಣಿ ನಿರತರಾಗಿದ್ದಾರೆ.

ಬಿಪಾಶ ಬಸು :
IFM
ಬಿಪಾಶ ಈ ವರ್ಷ ಎರಡು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ರೇಸ್' ಮತ್ತು 'ಬಚನಾ ಎ ಹಸೀನೊ' ಈ ಎರಡೂ ಚಿತ್ರಗಳೂ ಬಹುತಾರಾಗಣ ಚಿತ್ರಗಳಾಗಿದ್ದರೂ ಬಿಪಾಶಗೆ ಉತ್ತಮ ಪಾತ್ರವಿದ್ದು ತಮ್ಮದೇ ಛಾಪು ಮೂಡಿಸುವಲ್ಲಿ ಅವರು ಯಶಸ್ವಿಯೆನಿಸಿದ್ದಾರೆ. ಬಹುಸಮಯದ ಗೆಳೆಯ ಜಾನ್‌ರೊಂದಿಗಿನ ಸಂಬಂಧವೂ ಮುಂದುವರೆದಿದೆ.

ಮಿನಿಶಾ ಲಾಂಬ:
IFM

ಮಿನಿಶಾ ಲಾಂಬ ಬಾಲಿವುಡ್‌ನಲ್ಲಿ ಗುರುತಿಸಲ್ಪಟ್ಟಿದ್ದು ಈ ವರ್ಷ(2008). ವರ್ಷಾರಂಭದಲ್ಲಿ ಶೌರ್ಯ ಮತ್ತು ಅನಾಮಿಕ ಚಿತ್ರಗಳಲ್ಲಿ ಮಿನಿಶಾ ನಟಿಸಿದ್ದು ಈ ಚಿತ್ರಗಳಲ್ಲಿ ಮಿನಿಶಾರಿಗೆ ಹೇಳಿಕೊಳ್ಳುವಂತಹ ಪಾತ್ರವಿರಲಿಲ್ಲ. ಶೌರ್ಯ ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ಸಾಧಾರಣ ಮಟ್ಟಿನ ಯಶಸ್ಸು ಗಳಿಸಿತು. ಆದರೆ ಮಿನಿಶಾ ಹೆಸರು ಹೆಚ್ಚು ಚಾಲ್ತಿಗೆ ಬಂದಿದ್ದು ಬಚನಾ ಎ ಹಸಿನೊ ಮತ್ತು ಕಿಡ್ನಾಪ್ ಚಿತ್ರಗಳ ಮೂಲಕ. ಬಚನಾ ಚಿತ್ರ ಹಿಟ್ ಎನಿಸಿಕೊಂಡಿತು, ಕಿಡ್ನಾಪ್ ಸೋತರು ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡ ಮಿನಿಶಾ ಸುದ್ದಿ ಮಾಡಿದರು.