ನರಸಿಂಗ್ ಯಾದವ್ ಆಹಾರ ಪದಾರ್ಥಕ್ಕೆ ಮದ್ದು ಬೆರೆಸಿದ ವ್ಯಕ್ತಿ ಪತ್ತೆ

ಬುಧವಾರ, 27 ಜುಲೈ 2016 (09:59 IST)
ಒಲಿಂಪಿಕ್‌ಗೆ ಆಯ್ಕೆಯಾಗಿದ್ದ ಕುಸ್ತಿಪಟು ನರಸಿಂಗ್ ಯಾದವ್ ಆಹಾರ ಪದಾರ್ಥಗಳಿಗೆ ಸೋನೆಪತ್‌ನಲ್ಲಿ ನಿಷೇಧಿತ ಮದ್ದು ಬೆರೆಸಿದ ಹದಿವಯಸ್ಸಿನ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದು ಕುಸ್ತಿ ಒಕ್ಕೂಟದ ಭಾರತದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.

74 ಕೆಜಿ ವಿಭಾಗದ  ಕುಸ್ತಿಪಟು ನರಸಿಂಗ್ ಯಾದವ್ ನಿಷೇಧಿತ ಸ್ಟೆರಾಯ್ಡ್ ಸೇವಿಸಿದ್ದಕ್ಕಾಗಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲಾಗಿದ್ದು ಆಗಸ್ಟ್ 5ರಿಂದ ಆರಂಭವಾಗುವ ರಿಯೊ ಕ್ರೀಡಾಕೂಟಕ್ಕೆ ತೆರಳುವುದಿಲ್ಲ. ಮದ್ದು ಬೆರೆಸಿದ ವ್ಯಕ್ತಿಯನ್ನು ಸೂಪರ್ ಹೆವಿವೇಟ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕುಸ್ತಿಪಟುವೊಬ್ಬರ ಸಹೋದರ ಎಂದು ಗುರುತಿಸಲಾಗಿದೆ.

ಅವನು ನರಸಿಂಗ ರಾವ್ ಕೋಣೆಗೆ ಅತಿಕ್ರಮ ಪ್ರವೇಶ ಮಾಡಿ ಅವರ ಆಹಾರ ಪದಾರ್ಥಗಳಿಗೆ ಉದ್ದೀಪನ ಮದ್ದು ಬೆರೆಸಿದ್ದಾನೆಂದು ಆರೋಪಿಸಲಾಗಿದೆ.  ಈ ವ್ಯಕ್ತಿ ಸ್ವತಃ 65 ಕೆಜಿ ಕುಸ್ತಿಪಟುವಾಗಿದ್ದು ಜೂನಿಯರ್ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ಅವನು ಸಾಮಾನ್ಯವಾಗಿ ಚಾತ್ರಾಸಾಲ್ ಸ್ಟೇಡಿಯಂನಲ್ಲಿ ತರಬೇತಿ ಪಡೆದರೂ ಎಸ್‌ಎಐ ಸೋನೆಪತ್ ಕೇಂದ್ರಕ್ಕೆ ರಾಷ್ಟ್ರೀಯ ಶಿಬಿರಗಳ ಸಂದರ್ಭದಲ್ಲಿ ಭೇಟಿ ಮಾಡುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ