ಪಟ್ಟು ಬಿಡದೆ ಕಂಚಿಗೆ ಕೊರಳೊಡ್ಡಿದ ಅಮನ್‌ ಸೆಹ್ರಾವತ್: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ

Sampriya

ಶನಿವಾರ, 10 ಆಗಸ್ಟ್ 2024 (02:12 IST)
Photo Courtesy X
ಪ್ಯಾರಿಸ್‌: ಭಾರತದ ಕುಸ್ತಿಪಟು ಅಮನ್‌ ಸೆಹ್ರಾವತ್ ಅವರು ಶುಕ್ರವಾರ ತಡರಾತ್ರಿ ಪ್ಯಾರಿಸ್‌ನಲ್ಲಿ ತನ್ನ ಪಟ್ಟನ್ನು ಸಡಿಲಿಸದೆ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

22 ವರ್ಷದ ಭಾರತದ ಕುಸ್ತಿಪಟು ಕಂಚಿನ ಪದಕದ ಹೋರಾಟದಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ಮೂಲಕ ಭಾರತದ ಪದಕದ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಿದರು.

ಪುರುಷರ 57 ಕೆಜಿ ಫ್ರಿ ಸ್ಟೈಲ್‌ ಕುಸ್ತಿ ಕಂಚಿನ ಪದಕದ ಹೋರಾಟದಲ್ಲಿ ಅಮನ್‌ ಸೆಹ್ರಾವತ್‌ 13-5 ಅಂಕಗಳಿಂದ ಡೇರಿಯನ್ ಡೋಯಿ ಕ್ರೂಜ್ ಅವರನ್ನು ಮಣಿಸಿ, ಪದಕ ತಮ್ಮದಾಗಿಸಿಕೊಂಡರು.

ಅಮನ್‌ ಸೆಹ್ರಾವತ್‌ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದರು. ಇವರು ಜಪಾನಿನ ಅನುಭವಿ ರೇ ಹಿಗುಚಿ ವಿರುದ್ಧ ತಾಂತ್ರಿಕ ಶ್ರೇಷ್ಠತೆಯಿಂದ ಪಂದ್ಯವನ್ನು ಸೋತು, ಕಂಚಿನ ಪದಕದ ಪ್ಲೇ ಆಫ್‌ ಸುತ್ತಿಗೆ ಲಗ್ಗೆ ಹಾಕಿದ್ದರು.

ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಏಕೈಕ ಪುರುಷ ಕುಸ್ತಿ ಅಮನ್‌ ಸೆಹ್ರಾವತ್. ಲಂಡನ್ ಒಲಿಂಪಿಕ್ಸ್‌ ನಿಂದ ಈ ವರೆಗೆ, ಭಾಗವಹಿಸಿದ ಎಲ್ಲ ಒಲಿಂಪಿಕ್ಸ್‌ನಲ್ಲಿ ಒಂದಾದರೂ ಪದಕವನ್ನು ಗೆದ್ದಿರುವ ಕೀರ್ತಿ ಭಾರತದ ಕುಸ್ತಿಪಟುಗಳು ಹೊಂದಿದ್ದಾರೆ. ಭಾರತ ಒಟ್ಟಾರೆ ಒಲಿಂಪಿಕ್ಸ್‌ ಕುಸ್ತಿ ವಿಭಾಗದಲ್ಲಿ ಒಟ್ಟು 8 ಕಂಚಿನ ಪದಕವನ್ನು ಗೆದ್ದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ