ವಿನೇಶ್ ಫೋಗಟ್ ಪರ ವಾದಿಸಲಿರುವ ಈ ಖ್ಯಾತ ಲಾಯರ್ ಕೇಸ್ ತೆಗೆದುಕೊಂಡರೆ ಮುಗೀತು

Krishnaveni K

ಶುಕ್ರವಾರ, 9 ಆಗಸ್ಟ್ 2024 (10:24 IST)
Photo Credit: Facebook
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 100 ಗ್ರಾಂ ತೂಕ ಹೆಚ್ಚಾಯಿತು ಎಂಬ ಕಾರಣಕ್ಕೆ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಪರ ವಾದಿಸಲಿರುವ ಈ ಹಿರಿಯ ವಕೀಲರ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇವರು ಕೇಸ್ ಕೈಗೆತ್ತಿಕೊಂಡರೆ ಮುಗೀತು ಎನ್ನುವಷ್ಟು ನಂಬಿಕೆ ಅವರ ಮೇಲಿದೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪರವಾಗಿ ವಿನೇಶ್ ಫೋಗಟ್ ಕೇಸ್ ನಲ್ಲಿ ವಾದಿಸಲು ನಿಯೋಜನೆಗೊಂಡಿರುವುದು ಹಿರಿಯ ವಕೀಲ ಹರೀಶ್ ಸಾಳ್ವೆ. 69 ವರ್ಷದ ಸುಪ್ರೀಂಕೋರ್ಟ್ ವಕೀಲ ಹರೀಶ್ ಸಾಳ್ವೆ ಹೆಸರು ಕೇಳಿರುತ್ತೀರಿ. ಹಲವು ಪ್ರಮುಖ ಕೇಸ್ ಗಳನ್ನು ಕೈಗೆತ್ತಿಕೊಂಡು ಖ್ಯಾತಿ ಇವರದ್ದು.

ಈ ಹಿಂದೆ ಪಾಕಿಸ್ತಾನ ಬಂಧಿಸಿ ಮರಣದಂಡನೆಗೆ ಗುರಿಯಾಗಿಸಿದ್ದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಭಾರತದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ ಖ್ಯಾತಿ ಹರೀಶ್ ಸಾಳ್ವೆ ಅವರದ್ದು. ಇಂತಹ ಅನೇಕ ಪ್ರಮುಖ ಕೇಸ್ ಗಳಲ್ಲಿ ವಾದ ಮಂಡಿಸಿದ ಖ್ಯಾತಿ ಅವರದ್ದಾಗಿದೆ.

ಇದೀಗ ವಿನೇಶ್ ಫೋಗಟ್ ಗೆ ಫೈನಲ್ ಅನರ್ಹರಾಗಿದ್ದರೂ ಕನಿಷ್ಠ ಆಕೆಯ ಸಾಧನೆಗೆ ಬೆಳ್ಳಿ ಪದಕವನ್ನಾದರೂ ಕೊಡಿಸಿ ಎಂಬ ಮನವಿಯನ್ನು ಸಿಎಎಸ್ ಸ್ವೀಕರಿಸಿತ್ತು. ಈ ಪ್ರಕರಣದಲ್ಲಿ ವಿನೇಶ್ ಪರ ವಾದ ಮಂಡಿಸಲು ಹರೀಶ್ ಸಾಳ್ವೆಯನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ನಿಯೋಜಿಸಿದೆ.

ಹೀಗಾಗಿ ಹರೀಶ್ ತಮ್ಮ ವಾದ ವೈಖರಿ ಮೂಲಕ ವಿನೇಶ್ ಗೆ ನ್ಯಾಯ ಕೊಡಿಸುತ್ತಾರೆ ಎಂಬುದು ಕೋಟ್ಯಾಂತರ ಭಾರತೀಯರ ನಂಬಿಕೆಯಾಗಿದೆ. ಇಂದು 1 ಗಂಟೆಗೆ ವಿಚಾರಣೆ ಆರಂಭವಾಗಲಿದ್ದು, ಕೆಲವೇ ಗಂಟೆಗಳ ಬಳಿಕ ತೀರ್ಪು ಹೊರಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ