ಏಷ್ಯಾಕಪ್: ಇಂಡೋನೇಷ್ಯಾ ವಿರುದ್ಧ ಭಾರತಕ್ಕೆ 16-0 ಗೋಲು ಜಯಭೇರಿ

ಗುರುವಾರ, 26 ಮೇ 2022 (22:52 IST)

ಭಾರತ ತಂಡ 16-0 ಗೋಲುಗಳ ಭಾರೀ ಅಂತರದಿಂದ ಇಂಡೋನೇಷ್ಯಾ ವಿರುದ್ಧ ಜಯಭೇರಿ ಬಾರಿಸಿ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಸೂಪರ್-4ಗೆ ಲಗ್ಗೆ ಹಾಕಿದೆ.

ಮಾಜಿ ನಾಯಕ ಸರ್ದಾರ್ ಸಿಂಗ್ ಕೋಚ್ ಆಗಿರುವ ಭಾರತ ಯುವಪಡೆ ಅಂತಿಮ ಕ್ವಾರ್ಟರ್ ನಲ್ಲಿ 6 ಗೋಲು ಸಿಡಿಸಿ ರೋಚಕ ಜಯ ಸಾಧಿಸಿತು.

ಜಕಾರ್ತದಲ್ಲಿ ಗುರುವಾರ ನಡೆದ ಲೀಗ್ ನ ಅಂತಿಮ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸುವ ಮೂಲಕ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು.

ಉಭಯ ತಂಡಗಳು ತಲಾ 4 ಅಂಕ ಪಡೆದಿದ್ದರೂ ಭಾರತ ಗೋಲುಗಳ ಸರಾಸರಿಯಲ್ಲಿ ಮೇಲುಗೈ ಸಾಧಿಸುವ ಮೂಲಕ ಸೂಪರ್-4 ಪ್ರವೇಶಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ