ಫಿಫಾ ನೂತನ ರ್ಯಾಂಕಿಂಗ್ ಪಟ್ಟಿ: 96ನೇ ಸ್ಥಾನಕ್ಕೆ ಏರಿದ ಭಾರತ

ಶುಕ್ರವಾರ, 7 ಜುಲೈ 2017 (06:31 IST)
ನವದೆಹಲಿ: ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್(ಫಿಫಾ) ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 96ನೇ ಸ್ಥಾನಕ್ಕೆ ಏರಿದೆ.  ಇದು ಕಳೆದ ಎರಡು ದಶಕಗಳಲ್ಲಿ ತಂಡ ಹೊಂದಿದ ಅತ್ಯುತ್ತಮ ಶ್ರೇಯಾಂಕ ಎನಿಸಿದೆ.
 
ಭಾರತ ಇತ್ತೀಚೆಗೆ ಆಡಿದ 15 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿರುವುದು ರ‍್ಯಾಂಕಿಂಗ್‌ ಏರಿಕೆ ಕಾರಣವಾಗಿದೆ. ಸದ್ಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿರುವ ಇರಾನ್‌, ಏಷ್ಯಾ ತಂಡಗಳಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ತಂಡ ಎನಿಸಿದ್ದು, ಈ ಸಾಲಿನಲ್ಲಿ ಭಾರತ 12ನೇ ಸ್ಥಾನ ಗಳಿಸಿದೆ.
 
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರು, ‘ಎರಡು ವರ್ಷಗಳ ಹಿಂದೆ ನಾವು 173ನೇ ಸ್ಥಾನದಲ್ಲಿದ್ದೆವು. ಈಗ ಅತ್ಯುತ್ತಮ ಸ್ಥಾನವನ್ನು ತಲುಪಿದ್ದೇವೆ. ಇದು ಭಾರತೀಯ ಫುಟ್‌ಬಾಲ್‌ನ ಸತ್ವವನ್ನು ಸಾರುತ್ತದೆ. ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರು, ಸಿಬ್ಬಂದಿ, ಕೋಚ್‌ ಹಾಗೂ ಒಕ್ಕೂಟಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ