ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ವಿದಾಯ ಘೋಷಿಸಿರುವ ಭಾರತ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಮಹತ್ವದ ಹುದ್ದೆಯನ್ನು ಹಾಕಿ ಇಂಡಿಯಾ ಘೋಷಣೆ ಮಾಡಿದೆ.
ನಿನ್ನೆ 2-1 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿವುದರೊಂದಿಗೆ ಭಾರತಕ್ಕೆ ಎರಡು ಕಂಚಿನ ಪದಕವನ್ನು ತಂದುಕೊಡುವಲ್ಲಿ ಶ್ರೀಜೇಶ್ ಅವರು ಪ್ರಮುಖ ಪಾತ್ರರು. ಕಂಚಿನ ಪದಕದ ಮೂಲಕ ಶ್ರೀಜೇಶ್ ಅವರು ವಿದಾಯವನ್ನು ಹೇಳಿದ್ದರು. ಇದೀಗ ಶ್ರೀಜೇಶ್ಗೆ ಮಹತ್ವದ ಹುದ್ದೆ ನೀಡಿರುವ ಹಾಕಿ ಇಂಡಿಯಾ, ಪಿಆರ್ ಶ್ರೀಜೇಶ್ ಅವರನ್ನು ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
ಜೂನಿಯರ್ ಪುರುಷರ ಹಾಕಿ ತಂಡದ ಹೊಸ ಮುಖ್ಯ ಕೋಚ್ ಆಗಿ ಪಿ ಆರ್ ಶ್ರೀಜೇಶ್ ಅವರನ್ನು ನೇಮಿಸಲಾಗಿದೆ. ಆಟದಿಂದ ಕೋಚಿಂಗ್ ವರೆಗೆ, ನೀವು ಎಲ್ಲಾ ಯುವಕರನ್ನು ಪ್ರೇರೇಪಿಸುತ್ತಿರುವಿರಿ. ನಿಮ್ಮ ಕೋಚಿಂಗ್ ಅವಧಿಯನ್ನು ಎದುರುನೋಡುತ್ತಿದ್ದೇವೆ!" ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆಯಲಾಗಿದೆ.
ಪಂದ್ಯದ ನಂತರ ಎಚ್‌ಐ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು ಘೋಷಣೆ ಮಾಡಿದ್ದರು.
"ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಇಂದು ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ, ಆದರೆ ಇಂದು ನಾನು ಶ್ರೀಜೇಶ್ ಜೂನಿಯರ್ ಇಂಡಿಯಾ ಹಾಕಿ ತಂಡದ ಮುಖ್ಯ ಕೋಚ್ ಆಗಿರುತ್ತಾರೆ ಎಂದು ಘೋಷಿಸಲು ಬಯಸುತ್ತೇನೆ... ನಾವು ಇದನ್ನು SAI ಮತ್ತು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತೇವೆ...," ಸಿಂಗ್ ತಿಳಿಸಿದ್ದಾರೆ.