ಚಿಕ್ಕ ವಯಸ್ಸಿನಲ್ಲೇ ಟೇಬಲ್‌ ಟೆನ್ನಿಸ್‌ಗೆ ಗುಡ್‌ಬೈ ಹೇಳಿದ ಕನ್ನಡತಿ ಅರ್ಚನಾ ಕಾಮತ್

Sampriya

ಗುರುವಾರ, 22 ಆಗಸ್ಟ್ 2024 (19:43 IST)
Photo Courtesy X
ನವದೆಹಲಿ: ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ಅತ್ಯುನ್ನತ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಟೇಬಲ್ ಟೆನ್ನಿಸ್ ಆಟಗಾರ್ತಿ ಅರ್ಚನಾ ಕಾಮತ್ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಟೇಬಲ್‌ ಟೆನ್ನಿಸ್‌ಗೆ ವಿದಾಯ ಹೇಳಿದರು.

ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ  ಸ್ನಾತಕೋತ್ತರ ಪದವಿ ಪಡೆಯಲು ಇದೀಗ ಕನ್ನಡದ ಆಟಗಾರ್ತಿ ಚಿಕ್ಕವಯಸ್ಸಿನಲ್ಲೇ ಕ್ರೀಡೆಗೆ ವಿದಾಯ ಹೇಳಿದ್ದಾರೆ.

ಇನ್ನು ಕಾಮತ್‌ ಅವರಿಗೆ ಟೇಬಲ್ ಟೆನ್ನಿಸ್  ಉತ್ಸಾಹದ ಹೊರತಾಗಿಯೂ, ಅವರಿಗೆ ಹೆಚ್ಚುವರಿ ಶಿಕ್ಷಣ ಪಡೆಯಬೇಕೆಂಬ ಕನಸ್ಸಾಗಿತ್ತು. ಅದರಂತೆ ಇವರು 10ನೇ ಹಾಗೂ 12ನೇ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸ್ ಆಗಿದ್ದರು.

ನಾನು ಯಾವಾಗಲೂ ಟೇಬಲ್ ಟೆನ್ನಿಸ್‌ನಂತೆ ಅಧ್ಯಯನ ಮಾಡಲು ಇಷ್ಟಪಡುತ್ತೇನೆ. ಕಳೆದ ವರ್ಷ ಮಿಚಿಗನ್‌ನಲ್ಲಿ ಈ ಕೋರ್ಸ್‌ನ ಬಗ್ಗೆ ನಾನು ವಿಚಾರಿಸಿದೆ ಆದರೆ ನಂತರ ನಾವು ಮೊದಲ ಬಾರಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ತಂಡವಾಗಿ ಅರ್ಹತೆ ಪಡೆದು, ಅದರ ಮೇಲೆ ಕೇಂದ್ರಿಕರಿಸಿದ್ದೆ ಎಂದು ಕಾಮತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆರ್ಥಿಕ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಕಾಮತ್ ಅವರು, ಈಗ ಒಲಿಂಪಿಕ್ಸ್ ಮುಗಿದಿದೆ, ನಾನು ಹೆಚ್ಚು ಅಧ್ಯಯನ ಮಾಡಲು ಮತ್ತು ಎರಡು ವರ್ಷಗಳ ನಂತರ ಭಾರತಕ್ಕೆ ಹಿಂತಿರುಗಿ ವಿಭಿನ್ನ ಸಾಮರ್ಥ್ಯದಲ್ಲಿ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ. ನನ್ನ ನಿರ್ಧಾರಕ್ಕೂ ಹಣಕಾಸಿನ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಭಾರತಕ್ಕಾಗಿ ಆಡುವಾಗ ನನಗೆ ಬೇಕಾದ ಎಲ್ಲ ಬೆಂಬಲವನ್ನು ನಾನು ಪಡೆದುಕೊಂಡಿದ್ದೇನೆ, ಇದು ಅತ್ಯಂತ ದೊಡ್ಡ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ