ಸ್ವಾತಂತ್ರ್ಯೋತ್ಸವ ದಿನಕ್ಕೆ ಮುನ್ನ ವಿನೇಶ್ ಫೋಗಟ್ ಕನಸು ಭಗ್ನ

Krishnaveni K

ಗುರುವಾರ, 15 ಆಗಸ್ಟ್ 2024 (09:48 IST)
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 100 ಗ್ರಾಂ ತೂಕ ಹೆಚ್ಚಳವಾಗಿದ್ದರಿಂದ ಫೈನಲ್ ಗೆ ಅನರ್ಹರಾಗಿದ್ದ ವಿನೇಶ್ ಫೋಗಟ್ ಕನಿಷ್ಠ ಬೆಳ್ಳಿ ಪದಕ ನೀಡುವಂತೆ ಕ್ರೀಡಾ ಪ್ರಾಧಿಕಾರಕ್ಕೆ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿದೆ.

ಈ ಮೂಲಕ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಪದಕದ ಕನಸು ಭಗ್ನವಾಗಿದೆ. ಒಲಿಂಪಿಕ್ಸ್ ಸಮಿತಿ ತಮ್ಮನ್ನು ಫೈನಲ್ ಆಡುವುದರಿಂದ ಅನರ್ಹಗೊಳಿಸಿದ್ದರಿಂದ ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಿ ಎಂದು ವಿನೇಶ್ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.

ವಿನೇಶ್ ಪರವಾಗಿ ಭಾರತದಿಂದ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದ ನಡೆಸಿದ್ದರು. ವಿಚಾರಣೆ ನಡೆಸಿದ ಕ್ರೀಡಾ ಪ್ರಾಧಿಕಾರ ಇದೀಗ ತೀರ್ಪು ನೀಡಿದ್ದು ವಿನೇಶ್ ಬೆಳ್ಳಿ ಪದಕಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿದೆ. ಈ ಮೂಲಕ ಆಕೆಯ ಪದಕ ಪಡೆಯುವ ಕನಸು ಭಗ್ನವಾಗಿದೆ.

ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಡಾ ಅನ್ನಾಬೆಲ್ ಬೆನಟ್ ಎದುರು ಫ್ರೆಂಚ್ ವಕೀಲರು ಮತ್ತು ಭಾರತದ ವಕೀಲರು ತಮ್ಮ ವಾದ ಮಂಡಿಸಿದ್ದರು. ಕೆಲವು ದಾಖಲೆಗಳನ್ನು ಪರಿಶೀಲಿಸುವುದಕ್ಕಾಗಿ ನ್ಯಾಯಮಂಡಳಿ ತೀರ್ಪು ಮುಂದೂಡಿತ್ತು. ಇದೀಗ ನ್ಯಾಯಮಂಡಳಿ ಅರ್ಜಿ ತಿರಸ್ಕರಿಸುವ ಮೂಲಕ ವಿನೇಶ್ ಪದಕದ ಆಸೆಗೆ ತಣ್ಣೀರೆರಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ