ಯಾರೂ ಮಾಡದ ದಾಖಲೆ ಮಾಡಿದ ಶೂಟರ್ ಮನು ಭಾಕರ್

Krishnaveni K

ಮಂಗಳವಾರ, 30 ಜುಲೈ 2024 (17:04 IST)
ಪ್ಯಾರಿಸ್: ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಆದರೆ ಅದನ್ನು ಎರಡೆರಡು ಬಾರಿ ಒಂದೇ ಬಾರಿಗೆ ಮಾಡುವುದೆಂದರೆ ಅದರ ಹೆಮ್ಮೆಯೇ ಬೇರೆ. ಈಗ ಮನು ಭಾಕರ್ ಕೂಡಾ ಅಂತಹದ್ದೇ ಸಾಧನೆ ಮಾಡಿದ್ದಾರೆ.

10 ಮೀ. ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಮೊದಲು ಕಂಚಿನ ಪದಕ ಗೆದ್ದಿದ್ದ ಮನು ಭಾಕರ್ ಈ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು. ಇದಾಗಿ ಎರಡೇ ದಿನದಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಎರಡನೇ ಬಾರಿ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಸರಬ್ಜೋತ್ ಜೊತೆ ಮನು ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದುವರೆಗೆ ಇಂತಹದ್ದೊಂದು ದಾಖಲೆಯನ್ನೂ ಯಾವುದೇ ಭಾರತೀಯ ತಾರೆ ಮಾಡಿರಲಿಲ್ಲ.

ಭಾರತದ ಪರ ಒಂದಕ್ಕಿಂತ ಹೆಚ್ಚು ಒಲಿಂಪಿಕ್ಸ್ ಪದಕ ಗೆದ್ದ ಮಹಿಳಾ ತಾರೆಯರಿದ್ದಾರೆ. ಪಿವಿ ಸಿಂಧು ಬ್ಯಾಡ್ಮಿಂಟನ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಯಾವುದೇ ಭಾರತೀಯ ಮಹಿಳಾ ತಾರೆಯರು ಇದುವರೆಗೆ ಮಾಡಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ