Neeraj Chopra: ನೀರಜ್ ಚೋಪ್ರಾಗೆ ಯಾರ ಕಣ್ಣು ಬಿತ್ತೋ: ಡೈಮಂಡ್ ಲೀಗ್ ನಲ್ಲೂ ಜಸ್ಟ್ ಮಿಸ್

Krishnaveni K

ಶನಿವಾರ, 24 ಆಗಸ್ಟ್ 2024 (11:04 IST)
ನವದೆಹಲಿ: ಸ್ವಿಜರ್ ಲ್ಯಾಂಡ್ ನ ಲೂಝುನ್ ನಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ಭಾರತದ ಚಾಂಪಿಯನ್ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮತ್ತೆ ಕೂದಲೆಳೆಯಲ್ಲಿ ಮೊದಲ ಸ್ಥಾನ ಮಿಸ್ ಮಾಡಿಕೊಂಡಿದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನೀರಜ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಪರಿಸ್ಥಿತಿಯಿತ್ತು. ಆದರೆ ಕಳೆದ ಪ್ಯಾರಿಸ್ ಒಲಿಂಪಿಕ್ಸ್ ನಿಂದೀಚೆಗೆ ನೀರಜ್ ಯಾಕೋ ಕೂದಲೆಳೆಯಲ್ಲಿ ಮೊದಲ ಸ್ಥಾನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ಗಾಯವೂ ಕಾರಣ ಎನ್ನಬಹುದು. ಇದೀಗ ಡೈಮಂಡ್ ಲೀಗ್ ನಲ್ಲೂ 90 ಮೀ. ದೂರ ಎಸೆಯಲು ವಿಫಲರಾಗಿದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಂಡರ್ಸನ್ ಪೀಟರ್ಸ್ 90.81 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜರ್ಮನಿಯ ವೆಬ್ 87.08 ಮೀ. ದೂರ ಎಸೆದು ಮೂರನೇ ಸ್ಥಾನ ಪಡೆದುಕೊಂಡರು. ಸದ್ಯಕ್ಕೆ 90 ಮೀ. ದೂರ ಕ್ರಮಿಸುವುದೇ ನೀರಜ್ ಗುರಿಯಾಗಿದೆ.

ಆದರೆ ಅವರ ಫಿಟ್ನೆಸ್ ಇದಕ್ಕೆ ಸಹಕರಿಸುತ್ತಿಲ್ಲ. ಇದರಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಇಲ್ಲಿಯೂ ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ. 2022 ರಲ್ಲಿ ಡೈಮಂಡ್ ಲೀಗ್ ನಲ್ಲಿ 89.94 ಮೀ. ಎಸೆದಿದ್ದೇ ಅವರ ಕೆರಿಯರ್ ಬೆಸ್ಟ್ ಎಸೆತವಾಗಿದೆ. ಈಗ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದ್ದು ಎಲ್ಲಾ ಕ್ರೀಡಾ ಕೂಟಗಳಲ್ಲೂ ನೀರಜ್ ಗೆ ಪ್ರಬಲ ಎದುರಾಳಿಗಳೇ ಎದುರಾಗುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ