ಇಂದು ಬೆಂಗಳೂರಿನಲ್ಲಿ ಪಾಕಿಸ್ತಾನ V/s ಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯ

ಶುಕ್ರವಾರ, 20 ಅಕ್ಟೋಬರ್ 2023 (15:05 IST)
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವೆ ಮೊದಲ ವರ್ಲ್ಡ್ ಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.ಹೀಗಾಗಿ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ನಿನ್ನೆ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರಿಂದ ಭದ್ರತೆ ಪರಿಶೀಲನೆ ಮಾಡಲಾಗಿತ್ತು.ಇಂದು ಕೇಂದ್ರ ವಿಭಾಗ ಡಿಸಿಪಿ ಟಿ.ಹೆಚ್ ಶೇಖರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಶ್ವಾನದಳ ಮತ್ತು ಬಾಂಬ್ ಡಿಟೆಕ್ಟರ್ ರಿಂದ ಭಧ್ರತಾ ಪರಿಶೀಲನೆ  ನಡೆಸಿದ್ದು,ಕ್ರೀಡಾಂಗಣದಲ್ಲಿ 9 ಎಸಿಪಿ, 25 ಜನ ಇನ್ಸ್ಪೆಕ್ಟರ್, 86 ಪಿಎಸ್ಐ, 404 ಕಾನ್ಸ್ಟೇಬಲ್ ಗಳ ಸೇರಿದಂತೆ ಒಟ್ಟು 623 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
 
ವಿಶ್ವಕಪ್ ಪಂದ್ಯಕ್ಕಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೊಸ ಪ್ರಯೋಗ ಮಾಡಿದ್ದು,ನಗರದ ಹಲವೆಡೆ ಕ್ರಿಕೆಟ್‌ನೊಂದಿಗೆ ಸುರಕ್ಷತೆಯೂ ಮುಖ್ಯ ಎಂಬ ಸಂದೇಶ ಸಾರುವ ಹೋರ್ಡಿಂಗ್ಸ್‌ಗಳು,ಕಲಾವಿದ ಸತೀಶ್ ಆಚಾರ್ಯ ರಚನೆಯ ಕ್ರಿಕೆಟ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಬೆಂಗಳೂರಿನಲ್ಲಿ ಪೊಲೀಸ್ ಮ್ಯಾನ್ ಫಾರ್ ದ ಮ್ಯಾಚ್ ಎಂಬ ಹೋರ್ಡಿಂಗ್ಸ್‌ಗಳನ್ನ  ಹಾಕಿರುವ ಕಮಿಷನರ್ ದಯಾನಂದ್ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ