Paris Olympics: ಭಾರತೀಯ ಹಾಕಿ ತಂಡದಿಂದ ಇತಿಹಾಸ, ಏನಿದು ಇಲ್ಲಿದೆ ಡೀಟೈಲ್ಸ್

Sampriya

ಶುಕ್ರವಾರ, 2 ಆಗಸ್ಟ್ 2024 (19:59 IST)
Photo Courtesy X
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಭಾರತ ಗೆಲುವು ರಜತ ಪದಕ ವಿಜೇತ ಆಸ್ಟ್ರೇಲಿಯಾಗೆ ಆಘಾತವಾಗಿದೆ.  ಭಾರತ ಹಾಕಿ ತಂಡವು 52 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಜಯ ದಾಖಲಿಸಿತು, ಇತಿಹಾಸ ನಿರ್ಮಿಸಿತು.

ಭಾರತೀಯ ಪುರುಷರ ಹಾಕಿ ತಂಡವು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿರುವ ತಮ್ಮ ಕೊನೆಯ ಪೂಲ್ ಬಿ ಪಂದ್ಯದಲ್ಲಿ ಟೋಕಿಯೋ ಗೇಮ್ಸ್ ಬೆಳ್ಳಿ ಪದಕ ವಿಜೇತ ಮತ್ತು ಅವರ ದೊಡ್ಡ ಶತ್ರು ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು.  ಅಭಿಷೇಕ್ ಅವರು ಆರಂಭಿಕ ಗೂಲ್ ಮಾಡುವ ಮೂಲಕ ಖಾತೆ ತೆರೆದರು. ನಂತರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಹಾಕುವ ಮೂಲಕ ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ