Neeraj Chopra: ಚಿನ್ನ ಗೆಲ್ಲಬೇಕಾಗಿದ್ದ ನೀರಜ್ ಚೋಪ್ರಾ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಲು ಕಾರಣ ಬಯಲು

Krishnaveni K

ಶುಕ್ರವಾರ, 9 ಆಗಸ್ಟ್ 2024 (09:47 IST)
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ಗರಿಷ್ಠ ಅಂಕ ಪಡೆದಿದ್ದ ಭಾರತದ ನೀರಜ್ ಚೋಪ್ರಾ ಚಿನ್ನ ಗೆಲ್ಲುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಕೊನೆಗೆ ಅವರು ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದಕ್ಕೆ ಕಾರಣವೇನೆಂದು ಈಗ ಬಯಲಾಗಿದೆ.

ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಾರೆಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ತಾನು ಎಸೆದ ಮೊದಲ ಎಸೆತವನ್ನೇ ನೀರಜ್ ಫೌಲ್ ಮಾಡುವ ಮೂಲಕ ಎಲ್ಲರ ಆತಂಕ ಹೆಚ್ಚಿಸಿದರು. ಆದರೆ ಎರಡನೇ ಎಸೆತ ಯಶಸ್ವಿಯಾಯಿತು. ಆದರೆ ಉಳಿದೆಲ್ಲಾ ಎಸೆತಗಳನ್ನು ಫೌಲ್ ಮಾಡಿ ನೋಡುಗರ ಎದೆ ಬಡಿತ ಹೆಚ್ಚಿಸಿದರು.

ನೀರಜ್ ಎರಡನೇ ಎಸೆತವನ್ನು 89.45 ಮೀ. ಎಸೆದರೆ ಕಂಚು ಪದಕ ಗೆದ್ದಿದ್ದ ಆಂಡರ್ಸನ್ ಪೀಟರ್ಸ್ 88.54 ಮೀ. ದೂರ ಎಸೆದಿದ್ದರು. ಬಹುಶಃ ನೀರಜ್ ಇಷ್ಟೊಂದು ಫೌಲ್ ಮಾಡಿದ್ದು ಇದೇ ಮೊದಲೇನೋ. ಕಳೆದ ಬಾರಿ ಒಲಿಂಪಿಕ್ಸ್ ನಲ್ಲಿ, ಏಷ್ಯನ್ ಗೇಮ್ಸ್ ನಲ್ಲಿ ಯಾವತ್ತೂ ಹೀಗಾಗಿರಲಿಲ್ಲ.

ನೀರಜ್ ಆಟದಲ್ಲಿ ಇಷ್ಟೊಂದು ಫೌಲ್ ಆಗಲು ಮತ್ತು ಅವರು ಚಿನ್ನಕ್ಕೆ ಗುರಿಯಿಡಲು ಸಾಧ್ಯವಾಗದೇ ಇರುವುದಕ್ಕೆ ಅವರ ಗಾಯ ಕಾರಣವಾಗಿತ್ತಂತೆ. ಇದನ್ನು ಅವರ ಪೋಷಕರು ರಿವೀಲ್ ಮಾಡಿದ್ದಾರೆ. ನೀರಜ್ ಕಳೆದ ಕೆಲವು ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಒಲಿಂಪಿಕ್ಸ್ ನಲ್ಲೂ ಅವರು ಗಾಯದ ನಡುವೆಯೂ ಆಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ