Women's U19 T20 Asia Cup: ಬಾಂಗ್ಲಾ ಮಣಿಸಿದ ಭಾರತ

Sampriya

ಭಾನುವಾರ, 22 ಡಿಸೆಂಬರ್ 2024 (14:55 IST)
Photo Courtesy X
ಕೌಲಾಲಂಪುರ: ಕೌಲಾಲಂಪುರದಲ್ಲಿ ನಡೆದ  ಮಹಿಳಾ 19 ವರ್ಷದೊಳಗಿನವರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್‌ಗಳ ಅಂತರದಿಂದ ಮಣಿಸಿರುವ ಭಾರತ ಚಾಂಪಿಯನ್ ಆಯಿತು.

ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಿಕ ಆಟಗಾರ್ತಿ ಗೋಂಗಡಿ ತೃಷಾ ಅವರ ಸಮಯೋಜಿತ ಅರ್ಧಶತಕದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು.

ತೃಷಾ 47 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು.

ಬಾಂಗ್ಲಾದೇಶದ ಪರ ಫರ್ಜಾನಾ ಇಸ್ಮಿನ್ ನಾಲ್ಕು ವಿಕೆಟ್ ಗಳಿಸಿ ಭಾರತದ ಓಟಕ್ಕೆ ಕಡಿವಾಣ ಹಾಕಿದರು.

ಬಳಿಕ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಕುಸಿದ ಬಾಂಗ್ಲಾದೇಶ 18.3 ಓವರ್‌ಗಳಲ್ಲಿ 76 ರನ್‌ಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ ಆಯುಷಿ ಶುಕ್ಲಾ ಮೂರು ಮತ್ತು ಪಾರುಣಿಕ ಸಿಸೋಡಿಯಾ ಹಾಗೂ ಸೋನಂ ಯಾದವ್ ತಲಾ ಎರಡು ವಿಕೆಟ್ ಗಳಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ