D Gukesh: ಗರ್ಲ್ ಫ್ರೆಂಡ್ ಇದ್ದಾರೆಯೇ ಎಂದು ಕೇಳಿದ್ದಕ್ಕೆ ಗುಕೇಶ್ ಏನೆಂದು ಉತ್ತರಿಸಿದ್ದರು ಗೊತ್ತಾ

Krishnaveni K

ಶುಕ್ರವಾರ, 13 ಡಿಸೆಂಬರ್ 2024 (10:03 IST)
ನವದೆಹಲಿ: ವಿಶ್ವ ಚೆಸ್ ಚಾಂಪಿಯನ್ ಶಿಪ್ 2024 ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಯುವ ಚೆಸ್ ತಾರೆ ಡಿ ಗುಕೇಶ್ ಈಗ ಮನೆ ಮಾತಾಗಿದ್ದಾರೆ. ಅವರ ಹಿನ್ನಲೆ ಬಗ್ಗೆ ಸಾಕಷ್ಟು ಜನ ಸರ್ಚ್ ಮಾಡುತ್ತಿದ್ದಾರೆ.

ಇನ್ನೂ ಕೇವಲ 18 ವರ್ಷ ವಯಸ್ಸಿನ ಡಿ ಗುಕೇಶ್ ಹುಡುಗಿಯರ ಕ್ರಶ್ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗಿರುವಾಗ ಗುಕೇಶ್ ಗೆ ಗರ್ಲ್ ಫ್ರೆಂಡ್ ಇರಬಹುದಾ ಎಂಬ ಕುತೂಹಲವೂ ಕೆಲವರಿಗಿದೆ. ಗುಕೇಶ್ ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಇದೇ ಪ್ರಶ್ನೆ ಎದುರಾಗಿತ್ತು.

ಕಳೆದ ವರ್ಷ ಸಂದರ್ಶನವೊಂದರಲ್ಲಿ ಗುಕೇಶ್ ಗೆ ಸಂದರ್ಶಕರು ನಿಮಗೆ ಗರ್ಲ್ ಫ್ರೆಂಡ್ ಇದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಗುಕೇಶ್ ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬಳಿಕ ತುಂಟ ನಗೆ ಬೀರುತ್ತಾ ಇಲ್ಲಿ ಹೇಳಬಹುದೋ ಎನ್ನುವಂತೆ ಅನುಮಾನಿಸಿ ಕೊನೆಗೆ ಇಲ್ಲ ಎಂದು ಉತ್ತರಿಸಿದ್ದಾರೆ.

ಬಳಿಕ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಇಲ್ಲಿ ಯಾರೂ ಇಲ್ಲ ಹೇಳಬಹುದು ಎಂದರೂ ಗುಕೇಶ್ ಇಲ್ಲ ಎಂದೇ ಹೇಳಿದ್ದಾರೆ. ಆಗ ಇಲ್ಲದೇ ಇದ್ದರೇನಂತೆ. ಈಗಂತೂ ಗುಕೇಶ್ ಐತಿಹಾಸಿಕ ಸಾಧನೆಯಿಂದ ಮನೆ ಮಾತಾಗಿದ್ದು, ಇವರ ಹಿಂದೆ ಹುಡುಗಿಯರ ದಂಡು ಬೀಳವುದಂತೂ ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ