ಕಾಮನ್ ವೆಲ್ತ್ ಗೇಮ್ಸ್: ಬಾಕ್ಸಿಂಗ್ ನಲ್ಲಿ ಚಿನ್ನದ ಗೆದ್ದ ಅಮಿತ್, ನೀತು

ಭಾನುವಾರ, 7 ಆಗಸ್ಟ್ 2022 (16:29 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಮೊದಲ ಅವಧಿಯಲ್ಲೇ ಭಾರತೀಯರು ಪ್ರಚಂಡ ಪ್ರದರ್ಶನ ತೋರಿದ್ದಾರೆ.

ಬಾಕ್ಸಿಂಗ್ ನಲ್ಲಿ ಪುರುಷರ ವಿಭಾಗದಲ್ಲಿ ಅಮಿತ್ ಪಂಘಲ್, ಮಹಿಳೆಯ ವಿಭಾಗದಲ್ಲಿ ನೀತು ಫೈನಲ್ಸ್ ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು, ಮಹಿಳೆಯರ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ನ್ಯೂಜಿಲೆಂಡ್ ನ್ನು ಪೆನಾಲ್ಟಿ ಶೂಟೌಟ್ ನಲ್ಲಿ 2-1 ಅಂತರದಿಂದ ಗೆದ್ದ ಭಾರತೀಯ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಇಂದು ಮೊದಲ ಅವಧಿಯಲ್ಲೇ ಮೂರು ಪದಕ ಭಾರತಕ್ಕೆ ಒಲಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ