ಏಷ್ಯನ್ ಗೇಮ್ಸ್: ಆರ್ಚರಿಯಲ್ಲಿ ಮತ್ತೊಂದು ಚಿನ್ನ, ಪಿ.ವಿ. ಸಿಂಧು ಕನಸು ಭಗ್ನ

ಗುರುವಾರ, 5 ಅಕ್ಟೋಬರ್ 2023 (09:47 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಆರ್ಚರಿ ತಂಡ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟಿದೆ. ಆದರೆ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಸೋತು ನಿರ್ಗಮಿಸಿದ್ದಾರೆ.

ಆರ್ಚರಿ ಟೀಂ ಈವೆಂಟ್ ನಲ್ಲಿ ಭಾರತದ ಅದಿತಿ, ಜ್ಯೋತಿ, ಪರಿಣಿತಿ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಚೀನಾ ಸ್ಪರ್ಧಿಗಳ ಜೊತೆ ತೀವ್ರ ಪೈಪೋಟಿ ನಡೆಸಿದ ಭಾರತ ತಂಡ ಕೊನೆಯ ಸುತ್ತಿನಲ್ಲಿ ಮೂರು ಪರ್ಫೆಕ್ಟ್ 10 ಅಂಕ ಹೊಡೆದು ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟರು.

ವಿಶೇಷವೆಂದರೆ ಜ್ಯೋತಿಗೆ ಇದು ಆರ್ಚರಿಯಲ್ಲಿ ಎರಡನೇ ಚಿನ್ನದ ಪದಕ. ನಿನ್ನೆ ಮಿಕ್ಸೆಡ್ ಡಬಲ್ಸ್ ಈವೆಂಟ್ ನಲ್ಲೂ ಜ್ಯೋತಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಆದರೆ ಮಹಿಳೆಯ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂದು 16-21, 12-21 ಅಂತರದಿಂದ ಸೋತು ಕೂಟದಿಂದ ಹೊರಬಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ