ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ ಸೆಮಿಫೈನಲ್ ಗೆ
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋತುರಾಜ್ ಗಾಯಕ್ ವಾಡ್ ಬಳಗ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.
ನೇಪಾಳವೂ ಈ ಮೊತ್ತವನ್ನು ಉತ್ತಮವಾಗಿಯೇ ಬೆನ್ನತ್ತಿತ್ತು. ಆದರೆ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಕುಶಲ್ ಮಲ್ಲ, ಸಂದೀಪ್ ಜೋರಾ ತಲಾ 29, ದೀಪೇಂದ್ರ ಸಿಂಗ್ 32 ರನ್ ಗಳಿಸಿದರು. ಭಾರತದ ಪರ ರವಿ ಬಿಷ್ಣೋಯ್, ಆವೇಶ್ ಖಾನ್ ತಲಾ 3, ಅರ್ಷ್ ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.