ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಇಂದು ಭಾರತದ ಪ್ರಮುಖ ಸ್ಟಾರ್ ಗಳು ಕಣಕ್ಕಿಳಿಯುತ್ತಿದ್ದಾರೆ. ವೈಟ್ ಲಿಫ್ಟಿಂಗ್, ಟೆನಿಸ್ ನಲ್ಲಿ ಭಾರತ ನಿರೀಕ್ಷೆಯಿಟ್ಟುಕೊಂಡಿದೆ.
ಇದೀಗ ಭಾರತದ ಅಥ್ಲೆಟ್ ಗಳು ಸ್ಪರ್ಧೆಯಲ್ಲಿದ್ದಾರೆ. ಗಾಲ್ಫರ್ ಅದಿತಿ ಅಶೋಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಶೂಟರ್ ಗಳೂ ಇಂದು ಮತ್ತಷ್ಟು ಪದಕ ತಂದುಕೊಡುವ ನಿರೀಕ್ಷೆಯಿದೆ. ಪುರುಷರ ಲಾಂಗ್ ಜಂಪ್ ವಿಭಾಗದಲ್ಲಿ ಮುರಳಿ ಶ್ರೀಶಂಕರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯ 100 ಮೀ. ಹರ್ಡಲ್ಸ್ ನಲ್ಲಿ ಜ್ಯೋತಿ ಯಾರಾಜಿ ನಿತ್ಯಾ ರಾಮ್ ರಾಜ್ ಫೈನಲ್ ಸುತ್ತಿನಲ್ಲಿದ್ದಾರೆ. ಪುರುಷರ ಸ್ಕ್ವಾಶ್ ಟೀಂ ಇಂದು ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ.
ಇನ್ನು, ಭಾರತದ ವೈಟ್ ಲಿಫ್ಟಿಂಗ್ ತಾರೆ, ಒಲಿಂಪಿಕ್ ಪದಕ ವಿಜೇತೆ ಮೀರಾಭಾಯಿ ಚಾನು ಇಂದು ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಮತ್ತೊಬ್ಬ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಇಂದು 75 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್ ಹಂತದಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಟೆನಿಸ್ ನಲ್ಲಿ ಭಾರತದ ರೋಹನ್ ಬೋಪಣ್ಣ, ಋತುರಾಜ್ ಭೋಸಾಲೆ ಮಿಕ್ಸೆಡ್ ಡಬಲ್ಸ್ ಫೈನಲ್ ಪಂದ್ಯವಾಡಲಿದ್ದಾರೆ.