ಆಗಸ್ಟ್ 13 ಕ್ಕೆ ಧೋನಿ ನೇತೃತ್ವದ ಸಿಎಸ್ ಕೆ ಯುಎಇಗೆ

ಶನಿವಾರ, 7 ಆಗಸ್ಟ್ 2021 (11:09 IST)
ಚೆನ್ನೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಆಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಯತ್ತ ಪ್ರಯಾಣ ಬೆಳೆಸಲಿದೆ.

 
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ಐಪಿಎಲ್ 14 ರ ಬಾಕಿ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಇದರ ತಯಾರಿಗಾಗಿ ಚೆನ್ನೈ ತಂಡ ಆಗಸ್ಟ್ ನಲ್ಲಿಯೇ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದೆ.

ಧೋನಿ ಹಾಗೂ ರಾಷ್ಟ್ರೀಯ ತಂಡದಲ್ಲಿರದ ದೇಶೀಯ ಕ್ರಿಕೆಟಿಗರು ಮೊದಲು ಪ್ರಯಾಣ ಬೆಳೆಸಲಿದ್ದಾರೆ. ಇದೀಗ ಸಿಎಸ್ ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಹೇಗಾದರೂ ಐಪಿಎಲ್ ಗೆದ್ದು ಮತ್ತೆ ಮೊದಲಿನ ಚಾರ್ಮ್ ಕಂಡುಕೊಳ್ಳಲು ಸಿಎಸ್ ಕೆ ಪ್ರಯತ್ನ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ