ಒಲಿಂಪಿಕ್ಸ್ ಗಾಗಿ ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಭಜರಂಗ್ ಪೂನಿಯಾ

ಮಂಗಳವಾರ, 2 ಮಾರ್ಚ್ 2021 (09:31 IST)
ನವದೆಹಲಿ: ಒಲಿಂಪಿಕ್ಸ್ ಗೆ ತಯಾರಿ ನಡೆಸಲು ಏಕಾಗ್ರತೆ ಭಂಗವಾಗಬಾರದೆಂದು ಕುಸ್ತಿಪಟು ಭಜರಂಗ್ ಪೂನಿಯಾ ಸೋಷಿಯಲ್ ಮೀಡಿಯಾದಿಂದಲೇ ಹೊರಬರಲು ತೀರ್ಮಾನಿಸಿದ್ದಾರೆ.

 
ಕೆಲವು ದಿನಗಳವರೆಗೆ ಸೋಷಿಯಲ್ ಮೀಡಿಯಾ ಪುಟದಿಂದ ಹೊರಬರುವುದಾಗಿ ಪೂನಿಯಾ ಹೇಳಿದ್ದಾರೆ. ಒಲಿಂಪಿಕ್ಸ್ ಬಳಿಕ ನಿಮ್ಮನ್ನೆಲ್ಲಾ ಇಲ್ಲಿ ಭೇಟಿ ಮಾಡುತ್ತೇನೆ ಎಂದು ಪೂನಿಯಾ ಟ್ವೀಟ್ ಮಾಡಿದ್ದಾರೆ. ಅವರು 65 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ