ಏಷ್ಯನ್ ಪ್ಯಾರಾ ಗೇಮ್ಸ್ ವಿಜೇತರನ್ನು ಸನ್ಮಾನಿಸಿದ ಬ್ಲ್ಯಾಕ್ ಬೆರಿಸ್

Krishnaveni K

ಬುಧವಾರ, 7 ಫೆಬ್ರವರಿ 2024 (11:34 IST)
ಬೆಂಗಳೂರು: ಇತ್ತೀಚೆಗೆ ಹ್ಯಾಂಗ್ ಝೌನಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳನ್ನು ಭಾರತದ ಖ್ಯಾತ ಮೆನ್ಸ್ ವೇರ್ ಬ್ರ್ಯಾಂಡ್ ಬ್ಲ್ಯಾಕ್ ಬೆರಿಸ್ ಸನ್ಮಾನಿಸಿದೆ.

2023 ರ ಅಕ್ಟೋಬರ್ 22 ರಿಂದ 28 ರವರೆಗೆ ನಾಲ್ಕನೇ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 111 ಭಾರತೀಯ ಕ್ರೀಡಾ ಪಟುಗಳು ಪದಕ ವಿಜೇತರಾಗಿದ್ದರು. ಇವರೆಲ್ಲರನ್ನೂ ಬ್ಲ್ಯಾಕ್ ಬೆರಿಸ್ ತನ್ನ ಬೆಂಗಳೂರಿನ ಶಾಖೆಗೆ ಕರೆದು ಸನ್ಮಾನಿಸಿದೆ. ಈ ಗೇಮ್ಸ್ ನಲ್ಲಿ ಬ್ಲ್ಯಾಕ್ ಬೆರಿಸ್ ಕಂಪನಿಯೂ ಭಾರತೀಯ ಪ್ಯಾರಾ ಒಲಿಂಪಿಕ್ ಕಮಿಟಿ (ಪಿಸಿಐ) ಜೊತೆಗೆ ಸಹಭಾಗಿತ್ವ ಮಾಡಿಕೊಂಡಿತ್ತು.  ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಸಹಭಾಗಿತ್ವದಲ್ಲಿ ಅಧಿಕೃತ ಸೆರೆಮೊನಿಯಲ್ ಪಾಲುದಾರನಾಗಿತ್ತು. ಜೊತೆಗೆ ಭಾರತೀಯ ತಂಡಕ್ಕೆ ಉಡುಪುಗಳನ್ನು ಸಿದ್ಧಪಡಿಸಿಕೊಟ್ಟಿತ್ತು.

ಕ್ರೀಡಾಳುಗಳ ಉತ್ಸಾಹಕ್ಕೆ ಬೆಂಬಲವಾಗಿ ಬ್ಲ್ಯಾಕ್ ಬೆರಿಸ್ ನಿಂತಿತ್ತು. ಇದೀಗ ಪದಕ ವಿಜೇತರಿಗೆ ಸನ್ಮಾನಿಸುವ ಮೂಲಕ ಅವರ ಉತ್ಸಾಹ ಹೆಚ್ಚಿಸಿದೆ. ಸನ್ಮಾನ ಕಾರ್ಯಕ್ರಮದ ವೇಳೆ ಭಾರತದ ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಕೂಡಾ ಇದ್ದರು.  ಈ ಕ್ರೀಡಾಳುಗಳ ಸಾಧನೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಈ ಬಾರಿ ಪ್ಯಾರಾ ಗೇಮ್ಸ್ ನಲ್ಲಿ 29 ಚಿನ್ನ, 31 ಬೆಳ್ಳಿ ಮತ್ತು 51 ಕಂಚಿನದ ಪದಕ ಸೇರಿ ಒಟ್ಟು 111 ಪದಕಗಳನ್ನು ಕ್ರೀಡಾಗಳು ಗೆದ್ದುಕೊಟ್ಟಿದ್ದರು.

ಬ್ಲ್ಯಾಕ್ ಬೆರಿ ಸಹಸಂಸ್ಥಾಪಕ ಮತ್ತು ನಿರ್ದೇಶಕ ನಿತಿನ್ ಮೋಹನ್ ಮಾತು
‘ಎಲ್ಲಾ ಅಡೆತಡೆಗಳನ್ನೂ ಮೀರಿ ಈ ಎಲ್ಲಾ ಕ್ರೀಡಾಳುಗಳು ತೋರಿರುವ ಅಪ್ರತಿಮ ಸಾಧನೆಯ ಬಗ್ಗೆ ನಾನು ಹೆಮ್ಮೆ ಹೊಂದಿದ್ದೇನೆ. ಈ ಕ್ರೀಡಾಳುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರ ಪರಿಶ್ರಮ, ಬದ್ಧತೆ ಜನತೆ ಸ್ಪೂರ್ತಿ ತಂದಿದೆ. ಈ ಪುಟಾಣಿ ಕಾಣಿಕೆಯ ಮೂಲಕ ನಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೇವೆ. ಈ ಅಥ್ಲೆಟ್ ಗಳ ಅಭೂತಪೂರ್ವ ಪ್ರಯಾಣವನ್ನು ಅಭಿನಂದಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಿರುತ್ತೇವೆ. ಇವರ ಪಯಣದಲ್ಲಿ ಬ್ಲ್ಯಾಕ್ ಬೆರಿಗೂ ಜೊತೆಯಾಗಲು ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ