ಟ್ವಿಟರ್ ನಲ್ಲಿ ಕಿತ್ತಾಡಿಕೊಂಡು ವಿಚ್ಛೇದನ ಕೊಟ್ಟ ಬಾಕ್ಸರ್

ಶನಿವಾರ, 5 ಆಗಸ್ಟ್ 2017 (09:23 IST)
ಲಂಡನ್: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಪಾಕಿಸ್ತಾನ ಮೂಲದ ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮತ್ತು ಫರ್ಯಾಲ್ ಮಕ್ದೂಮ್ ಜಗಳ ಟ್ವಿಟರ್ ತನಕ ಬಂದು ವಿಚ್ಛೇದನದ ಹಂತಕ್ಕೆ ತಲುಪಿದೆ.

 
ಅಮೀರ್ ಖಾನ್ ಪತ್ನಿ ಇನ್ನೊಬ್ಬನ ಜತೆಗೆ ಡೇಟಿಂಗ್ ನಡೆಸಿ ತನಗೇ ಖೋ ಕೊಟ್ಟ ವಿಚಾರವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದು, ಆಕೆಗೆ ಹಿಗ್ಗಾ ಮುಗ್ಗಾ ಟ್ವೀಟ್ ಗಳ ಮೂಲಕ ಜಾಡಿಸಿದ್ದಾನೆ. ಕೊನೆಗೆ ಪತ್ನಿಗೆ ವಿಚ್ಛೇದನ ನೀಡುತ್ತಿರುವುದಾಗಿ ಹೇಳಿದ್ದಾನೆ.

ಇದಕ್ಕೆ ಫರ್ಯಾಲ್ ಕೂಡಾ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಳು. ಹೀಗೆ ಬಹಿರಂಗವಾಗಿ ಕಿತ್ತಾಡಿಕೊಂಡ ಈ ಸೆಲೆಬ್ರಿಟಿ ದಂಪತಿಗೆ ಒಬ್ಬ ಹೆಣ್ಣು ಮಗಳೂ ಇದ್ದಾಳೆ. ಗಂಡ ಹೆಂಡತಿ ಜಗಳದಲ್ಲಿ ಆ ಕೂಸು ಮಾತ್ರ ಬಡವಾಗಿದ್ದು ನಿಜ.

ಇದನ್ನೂ ಓದಿ.. ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ