2016ರ ರಿಯೋ ಕ್ರೀಡಾಕೂಟ: ಒಲಿಂಪಿಕ್ ಅಥ್ಲೀಟ್‌ಗಳ ಸುರಕ್ಷತೆಗೆ ಚೀನಾ ಎಚ್ಚರಿಕೆ

ಶನಿವಾರ, 30 ಜುಲೈ 2016 (11:50 IST)
ಚೀನಾದ ಅಥ್ಲೀಟ್‌ಗಳು, ಅಧಿಕಾರಿಗಳು ಮತ್ತು ಮಾಧ್ಯಮ ಸದಸ್ಯರ ದರೋಡೆ, ಕಳವು ಮಾಡಿದ ಘಟನೆಗಳ ಹಿನ್ನೆಲೆಯಲ್ಲಿ ರಿಯೊ ಡಿ ಜನೈರೊಗೆ ತೆರಳುತ್ತಿರುವ ಕ್ರೀಡಾಪಟುಗಳಿಗೆ ಚೀನಾ ಸುರಕ್ಷತೆ ಎಚ್ಚರಿಕೆ ನೀಡಿದೆ.

ಪ್ರವಾಸಿಗಳು ನಗರದ ಅಪಾಯಕಾರಿ ಪ್ರದೇಶಗಳನ್ನು ತಪ್ಪಿಸಬೇಕು, ದುಬಾರಿ ವಾಚ್‌ಗಳನ್ನು ಮನೆಯಲ್ಲೇ ಬಿಡಬೇಕು ಮತ್ತು ಬ್ಯಾ‌ಕ್‌ಪ್ಯಾಕ್ ಒಯ್ಯಬಾರದು ಹಾಗೂ ಬೀದಿಯಲ್ಲಿ ನಡೆಯುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡಬಾರದು ಎಂದು ಎಚ್ಚರಿಸಿದೆ.

ದರೋಡೆ ನಡೆದ ಸಂದರ್ಭದಲ್ಲಿ ಜನರು ಶಾಂತವಾಗಿರುವಂತೆಯೂ, ದರೋಡೆಕೋರರ ಜತೆ ವಾದದಲ್ಲಿ ತೊಡಗದಂತೆಯೂ ಅದು ಸಲಹೆ ಮಾಡಿದೆ. ರಿಯೋಗೆ ತೆರಳಿರುವ ಚೀನಾದ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳ ನಿಯೋಗದಲ್ಲಿ ಒಟ್ಟು 711 ಜನರಿದ್ದು ಅತೀ ದೊಡ್ಡ ಸಂಖ್ಯೆಯಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ