ಕಾಮನ್ ವೆಲ್ತ್ ಗೇಮ್ಸ್ ಗೆ ಇಂದು ಬರ್ಮಿಂಗ್ ಹ್ಯಾಮ್ ನಲ್ಲಿ ಚಾಲನೆ: ಭಾರತೀಯರ ಮೇಲೆ ಭಾರೀ ನಿರೀಕ್ಷೆ

ಗುರುವಾರ, 28 ಜುಲೈ 2022 (08:50 IST)
ಬರ್ಮಿಂಗ್ ಹ್ಯಾಮ್: 2022 ರ ಕಾಮನ್ ವೆಲ್ತ್ ಗೇಮ್ಸ್ ಗೆ ಇಂದಿನಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ಚಾಲನೆ ಸಿಗಲಿದೆ.

ಮಿನಿ ಒಲಿಂಪಿಕ್ ಕೂಟವೆಂದೇ ಪರಿಗಣಿಸಲ್ಪಡುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಅಥ್ಲೆಟ್ ಗಳ ಮೇಲೆ ಭಾರೀ ನಿರೀಕ್ಷೆಯಿದೆ. 33 ಮಂದಿ ಅಥ್ಲೆಟ್ ಗಳು,  10 ಮಂದಿ ಬ್ಯಾಡ್ಮಿಂಟನ್ ತಾರೆಯರು, 12 ಮಂದಿ ಬಾಕ್ಸರ್ ಗಳು, 13 ಮಂದಿ ಸೈಕ್ಲಿಸ್ಟ್ ಗಳು, 7 ಮಂದಿ ಜಿಮ್ನಾಸ್ಟಿಯನ್ ತಾರೆಯರು, 6 ಮಂದಿ ಜೂಡೋ ಪಟುಗಳು, ಲಾನ್ ಬೌಲ್ಸ್ ನಲ್ಲಿ 10 ಮಂದಿ ಆಟಗಾರರು, ಸ್ಕ್ವಾಶ್ ನಲ್ಲಿ 9, ಸ್ಮಿಮ್ಮಿಂಗ್ ನಲ್ಲಿ ನಾಲ್ವರು, 8 ಮಂದಿ ಟೇಬಲ್ ಟೆನಿಸ್ ತಾರೆಯರು, ಟ್ರೈಥ್ಲಾನ್ ವಿಭಾಗದಲ್ಲಿ ನಾಲ್ವರು, ವೈಟ್ ಲಿಫ್ಟಿಂಗ್ ನಲ್ಲಿ 15 ಸ್ಪರ್ಧಿಗಳು,ಕುಸ್ತಿ  ವಿಭಾಗದಲ್ಲಿ 11 ಮಂದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತೀಯ ಸ್ಪರ್ಧಿಗಳು ಪದಕದ ಬೇಟೆಗಿಳಿಯಲಿದ್ದಾರೆ. ಇದಲ್ಲದೆ, ಹಾಕಿ, ಮಹಿಳೆಯರ ಕ್ರಿಕೆಟ್ ವಿಭಾಗದಲ್ಲೂ ಭಾರತ ಸ್ಪರ್ಧೆಗಿಳಿಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ