ಟಿ20 ಸರಣಿಗೆ ಟ್ರಿನಿಡಾಡ್ ಬಂದಿಳಿದ ಟೀಂ ಇಂಡಿಯಾ: ಕೊಹ್ಲಿ ಮಿಸ್ಸಿಂಗ್ ಎಂದ ಅಭಿಮಾನಿಗಳು

ಬುಧವಾರ, 27 ಜುಲೈ 2022 (08:20 IST)
ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಟ್ರಿನಿಡಾಡ್ ಗೆ ಬಂದಿಳಿದಿದೆ.

ನಾಯಕ ರೋಹಿತ್ ಶರ್ಮಾ ಮತ್ತು ಇತರ ಆಟಗಾರರು ಟ್ರಿನಿಡಾಡ್ ಹೋಟೆಲ್ ಗೆ ಬಂದಿಳಿದಿದ್ದಾರೆ. ರೋಹಿತ್ ಜೊತೆಗೆ ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ರಿಷಬ್ ಪಂತ್, ದಿನೇಶ್ ಕಾರ್ತಿಕ್ ಕೆರೆಬಿಯನ್ ನಾಡಿಗೆ ಆಗಮಿಸಿದ್ದಾರೆ.

ಜುಲೈ 29 ರಿಂದ ಟಿ20 ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾ ಆಗಮನದ ವಿಡಿಯೋ ನೋಡಿ ಅಭಿಮಾನಿಗಳು ವಿರಾಟ್ ಕೊಹ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಸರಣಿಯ ಬಳಿಕ ಜಿಂಬಾಬ್ವೆ ವಿರುದ್ಧದ ಸರಣಿಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ