ಕೊಪಾ ಅಮೆರಿಕ: ಯುಕಾಡರ್ ವಿರುದ್ಧ ಅಮೆರಿಕ 2-1 ಜಯ, ಸೆಮಿಫೈನಲ್‌ಗೆ

ಶುಕ್ರವಾರ, 17 ಜೂನ್ 2016 (14:00 IST)
ಕೊಪಾ ಅಮೆರಿಕ ಟೂರ್ನಿಯಲ್ಲಿ ಅಮೆರಿಕ ಗುರುವಾರ ಯುಕಾಡರ್ ತಂಡವನ್ನು 2-1ಯಿಂದ ಸೋಲಿಸುವ ಮೂಲಕ ಸೆಮಿಫೈನಲ್ ಹಂತವನ್ನು ತಲುಪಿದೆ. ಕ್ಲಿಂಟ್ ಡೆಂಪ್ಸಿ 22ನೇ ನಿಮಿಷದಲ್ಲಿ ಗೋಲೊಂದನ್ನು ಹೊಡೆದು ಅಮೆರಿಕ 1-0ಯಿಂದ ಮುನ್ನಡೆ ಪಡೆಯಿತು.  ಬಳಿಕ ಗ್ಯಾಸಿ ಜಾರ್ಡೇಸ್ ಅವರಿಗೆ ಡೆಂಪ್ಸಿ ನೀಡಿದ ಪಾಸನ್ನು ಜಾರ್ಡೇಸ್ ಗೋಲಾಗಿಸಿದರು.
 
 ಅಮೆರಿಕ ಈಗ ಮುಂದಿನ ವಾರ ನಡೆಯುವ ಸೆಮಿಫೈನಲ್ಸ್‌ನಲ್ಲಿ ಅರ್ಜೆಂಟೈನಾ ಅಥವಾ ವೆನೆಜುವೆಲಾ ತಂಡದ ವಿರುದ್ಧ ಆಡಲಿದೆ. ಆದರೆ ಕ್ಲಿನ್ಸ್‌ಮ್ಯಾನ್ ತಂಡದಲ್ಲಿ ಮಿಡ್‌ಫೀಲ್ಡರ್ ಜರ್ಮೈನ್ ಜೋನ್ಸ್ ಅವರಿಗೆ ಉತ್ತರಾರ್ಧದಲ್ಲಿ ಹಳದಿ ಕಾರ್ಡ್ ನೀಡಿದ್ದರಿಂದ ಅವರು ಮುಂದಿನ ಸೆಮಿಫೈನಲ್ ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ.
 
ಫ್ರಾನ್ಸ್ ಮೂಲಕ ಮಿಡ್‌ಫೀಲ್ಡರ್ ಬೆಡೋಯಾ ಮತ್ತು ಹ್ಯಾಮ್‌ಬರ್ಗ್ ಸ್ಟ್ರೈಕರ್ ಬಾಬಿ ವುಡ್ ಅವರು ಕೂಡ ಹಳದಿ ಕಾರ್ಡ್ ಪಡೆದಿದ್ದು, ಸೆಮಿಫೈನಲ್‌ನಲ್ಲಿ ಮಿಸ್ ಆಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ