ದಂಗಲ್ ಸಿನಿಮಾ: ಅಮೀರ್ ಖಾನ್ ಮೇಲೆ ಕೇಸು ಜಡಿಯಲು ಗೀತಾ ಪೋಗಟ್ ಕೋಚ್ ಚಿಂತನೆ

ಗುರುವಾರ, 29 ಡಿಸೆಂಬರ್ 2016 (13:59 IST)
ಮುಂಬೈ: ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ಕುಸ್ತಿಪಟು ಗೀತಾ ಪೋಗಟ್ ಜೀವನದ ನೈಜ ಕತೆಯನ್ನು ಒಳಗೊಂಡಿದೆ. ಈ ಸಿನಿಮಾ ಈಗ ವಿವಾದಕ್ಕೆ ಒಳಗಾಗಿದೆ. ಗೀತಾ ಪೋಗಟ್ ನ ಕೋಚ್ ಪಿ ಆರ್ ಸೋಧಿ ಅಮೀರ್ ಮೇಲೆ ಕೇಸು ಜಡಿಯಲು ಚಿಂತನೆ ನಡೆಸಿದ್ದಾರೆ.


2010 ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನ ಐವರು ಕೋಚ್ ಗಳಲ್ಲಿ ಒಬ್ಬರಾದ ಸೋಧಿ ಪಿ ಆರ್ ಕದಮ್ ಎನ್ನುವ ಪಾತ್ರವೊಂದನ್ನು ಆಕ್ಷೇಪಾರ್ಹವಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಈ ಪಾತ್ರದ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಲಾಗಿದೆ. ನಿಜ ಸಂಗತಿಯನ್ನು ಮರೆ ಮಾಚಲಾಗಿದೆ. ಇದು ನನ್ನ ಗೌರವಕ್ಕೆ ಧಕ್ಕೆ ತರುತ್ತಿದೆ. ಸಿನಿಮಾ ನೋಡಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತೇನೆ” ಎಂದು ಸೋಧಿ ಹೇಳಿದ್ದಾರೆ.

ಇದರೊಂದಿಗೆ ಅಮೀರ್ ಅಭಿನಯದ ಸೂಪರ್ ಹಿಟ್ ಚಿತ್ರ ವಿವಾದಕ್ಕೆ ಕಾರಣವಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಅವರು ಕುಸ್ತಿಪಟುಗಳಾಗಬೇಕೆಂದು ಬಯಸುವ ತಂದೆಯ ಪಾತ್ರದಲ್ಲಿ ಅಮೀರ್ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ