ಅವರ ಬಗ್ಗೆ ನಿಮಗೆ ತಿಳಿದಿರದ ಮಾಹಿತಿಗಳು ಇಲ್ಲಿವೆ ಓದಿ:
*ಅಗರ್ತಲಾದಲ್ಲಿ ಜನಿಸಿದ್ದ ದೀಪಾ ತಂದೆ ದುಲಾಲ್ ಕರ್ಮಾಕರ್ ಭಾರತ ಎತ್ತುವಿಕೆಯ ಕ್ರೀಡೆಯ ಕೋಚ್.ತಾಯಿ ಗೀತಾ ಹೌಸ್ ವೈಫ್. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ದೀಪಾಗೆ ಒಬ್ಬ ಅಕ್ಕ ಇದ್ದಾರೆ.
2007ಲ್ಲಿ ಜೂನಿಯರ್ ನ್ಯಾಷನಲ್ಸ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನದ & 2 ಬೆಳ್ಳಿ ಪದಕಗಳನ್ನು ಗೆದ್ದ ಅವರು 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಮೊದಲ ವನಿತೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಕಳೆದ 2015ರ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಮಹಿಳೆ(ಐದನೇ ಸ್ಥಾನ) ಎಂಬ ಕೀರ್ತಿ ಅವರದು.