ಕೆಳಕ್ಕೆ ಬೀಳುವಾಗ ಕಾಲು ಮುರಿದುಕೊಂಡ ಜಿಮ್ನಾಸ್ನಿಕ್ ಸ್ಪರ್ಧಿ

ಸೋಮವಾರ, 8 ಆಗಸ್ಟ್ 2016 (15:44 IST)
ರಿಯೊ ಡಿ ಜನೈರೊ:  ಒಲಿಂಪಿಕ್ಸ್ ಪಾರ್ಕ್‌ನಲ್ಲಿ ನಡೆದ ಪುರುಷರ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಫ್ರೆಂಚ್ ಜಿಮ್ನಾಸ್ಟ್ ಸಮೀರ್ ಅಯಿತ್ ಸಯೀದ್ ಅರ್ಹತಾ ಸುತ್ತಿನ ಸಂದರ್ಭದ ವಾಲ್ಟ್ ಪ್ರದರ್ಶನದ ಕಸರತ್ತಿನಲ್ಲಿ ಕೆಳಕ್ಕೆ ಬೀಳುವಾಗ ಕಾಲುಮುರಿದುಕೊಂಡ ಅವಘಡ ಶನಿವಾರ ಸಂಭವಿಸಿದೆ.
 
26 ವರ್ಷದ ಸ್ಪರ್ಧಿ ಕೆಳಗೆ ಬಿದ್ದಾಗ  ಮೂಳೆಗಳು ಮುರಿದು ಮೊಣಕಾಲು ಮಂಡಿಯ ಕೆಳಗೆ ಸಡಿಲವಾಗಿತ್ತು. ಕೆಳಕ್ಕೆ ಬಿದ್ದಿದ್ದ ಐತ್ ಸಯದ್‌ನಿಗೆ  ವೈದ್ಯರು ಪ್ರಥಮ ಚಿಕಿತ್ಸೆ ನೀಡುವಾಗ ಸಯದ್ ನೋವಿನ ನಡುವೆಯೂ ತಮ್ಮ ಒಂದು ಕೈಯನ್ನು ಮೇಲೆತ್ತಿದಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು.
 
 ಐತ್ ಸಯದ್ ಅವರ ಒಲಿಂಪಿಕ್ ಕನಸು ನುಚ್ಚುನೂರಾಗಿದ್ದು ಇದೇ ಮೊದಲ ಬಾರಿಯಲ್ಲ. ಐರೋಪ್ಯ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಡೆ ಅವರು ಕಾಲಿನ ಮೂಳೆ ಮುರಿದುಕೊಂಡಿದ್ದರಿಂದ ಅವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರಲಿಲ್ಲ.

 
 

ವೆಬ್ದುನಿಯಾವನ್ನು ಓದಿ