ಪುರುಷರ ಆರ್ಚರಿ ಡಬಲ್ಸ್, ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತಕ್ಕೆ ಸೋಲು
ಸೋಮವಾರ, 26 ಜುಲೈ 2021 (10:37 IST)
ಟೋಕಿಯೋ: ಒಲಿಂಪಿಕ್ಸ್ ನ ಪುರುಷರ ಆರ್ಚರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ಕನಸು ಭಗ್ನವಾಗಿದೆ. ಪುರುಷರ ತಂಡ ದಕ್ಷಿಣ ಕೊರಿಯಾ ತಂಡದ ವಿರುದ್ಧ ಸೋಲನುಭವಿಸಿದೆ.
ಕ್ವಾರ್ಟರ್ ಫೈನಲ್ ಗೇರಿ ನಿರೀಕ್ಷೆ ಹುಟ್ಟಿಸಿದ್ದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ತಂಡ ಪ್ರಬಲ ಎದುರಾಳಿ ವಿರುದ್ಧ ಸೊಲ್ಲೆತ್ತದೇ 0-6 ಅಂತರದಿಂದ ಸೋತಿದೆ.
ಇನ್ನು, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸಾತ್ವಿಕ್ ಸಾಯಿ ರೆಡ್ಡಿ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷ್ಯಾದ ಮಾರ್ಕಸ್ ಫರ್ನಾಲ್ಡಿ-ಕೆವಿನ್ ಸಂಜಯ ವಿರುದ್ಧ 13-21,12,21 ಅಂತರದಿಂದ ಸೋತಿದೆ.